ಬೆಂಗಳೂರು: ಇದುವರೆಗೆ ಪೋನ್ ಗಳಿಗೆ ಕರೆ ಮಾಡಿ, ಬ್ಯಾಂಕ್ ಅಧಿಕಾರಿಗಳಂತೆ ಮಾತನಾಡಿ ನಿಮ್ಮ ಬ್ಯಾಂಕ್ ಮಾಹಿತಿ ಪಡೆದು ವಂಚಿಸ್ತಾ ಇದ್ದಂತ ವಂಚಕರು, ಈಗ ಮತ್ತೊಂದು ದಾರಿ ಹಿಡಿದಿದ್ದಾರೆ. ನೀವು ಯಾರ್ ಯಾರಿಗೆ ಅವರು ಕೇಳಿದ್ರೂ ಅಂತ ನಿಮ್ಮ ಪಾನ್, ಆಧಾರ್ ಕಾರ್ಡ್ ಕೊಟ್ರೆ ಸಾಕು.. ಮುಂದೆ ಎದುರಾಗೋದೆ ದೊಡ್ಡ ಆಘಾತವಾಗಿದೆ. ಅದೇನು ಅಂತ ಮುಂದೆ ಓದಿ.
ನಗರದಲ್ಲಿ ಪಾನ್, ಆಧಾರ್ ಕಾರ್ಡ್ ಪ್ರತಿಗಳನ್ನು ಪಡೆದು, ಅದರಲ್ಲಿನ ಸಂಖ್ಯೆಗಳಿಗೆ ಕರೆ ಮಾಡಿದ್ದಂತ ವ್ಯಕ್ತಿಯೊಬ್ಬ, ಚೈನ್ ಲಿಂಕ್ ಮೂಲಕ ಹಣ ಗಳಿಸಬಹುದು. ಜಸ್ಟ್ ನಿಮ್ಮ ಪಾನ್, ಆಧಾರ್ ಕಾರ್ಡ್ ಕೊಟ್ರೆ ಸಾಕು ಅಂತ ಪುಲಕೇಶಿ ನಗರದ ನಯೀಮ್ ತಾಜ್ ಎಂಬುವರನ್ನು ನಂಬಿಸಿದ್ದಾರೆ. ಇದರಂತೆ ನಂಬಿ ಕೊಟ್ಟಿದ್ದಕ್ಕೆ ಒಂದು ಸಾವಿರ ಹಣ ಕೂಡ ಕೊಟ್ಟಿದ್ದಾರೆ.
Covid19 Case: ತುಮಕೂರು ಜಿಲ್ಲೆ ಜನತೆಗೆ ಬಿಗ್ ಶಾಕ್: ಕಳೆದ 10 ದಿನದಲ್ಲಿ 109 ಜನರಿಗೆ ಕೋವಿಡ್ ದೃಢ
ಈ ಬಳಿಕ ಅಸಲಿ ಆಟ ಶುರು ಮಾಡಿದಂತ ವ್ಯಕ್ತಿಗಳು. ಮತ್ತಷ್ಟು ಜನರಿಂದ ಪಾನ್, ಆಧಾರ್ ಕಾರ್ಡ್ ಕೊಡಿಸಿ. ಚೈನ್ ಲಿಂಕ್ ಮೂಲಕ ಮತ್ತಷ್ಟು ಹಣ ಬರುತ್ತದೆ ಎಂಬುದಾಗಿ ನಂಬಿಸಿದ್ದಾರೆ. ಅವರ ಮಾತು ನಂಬಿದಂತ ನಯೀಮ್ ತಾಜ್ 25ಕ್ಕೂ ಹೆಚ್ಚು ಜನರಿಂದ ಪಾನ್, ಆಧಾರ್ ಕಾರ್ಡ್ ಗಳನ್ನು ಆರೋಪಿಗೆ ಕೊಡಿಸಿದ್ದಾರೆ.
BIG NEWS: ಇನ್ಮುಂದೆ ನಾನು ಕಣ್ಣೀರು ಹಾಕಲ್ಲ – ಮಾಜಿ ಸಿಎಂ ಕುಮಾರಸ್ವಾಮಿ ಶಪಥ
ಹೀಗೆ ಪಾನ್, ಆಧಾರ್ ಕಾರ್ಡ್ ( Pan and Aadhar Card ) ಪಡೆದಂತ ಆರೋಪಿಗಳು, ನಗರದ ವಿವಿಧೆಡೆ ಆ ದಾಖಲೆಗಳನ್ನು ಬ್ಯಾಂಕ್ ಗಳಿಗೆ ನೀಡಿ, ಇಎಂಐ ಮೂಲಕ ವಾಹನಗಳನ್ನು ಖರೀದಿ ಮಾಡಿದ್ದಾರೆ. ಒಂದು ತಿಂಗಳ ಬಳಿಕ ಇಎಂಐ ಬಾಕಿ ಇದೆ. ಕಟ್ಟಿ ಎಂದು ಬ್ಯಾಂಕ್ ನಿಂದ ಕರೆ ಬಂದಾಗಲೇ ತಾವು ಮೋಸಕ್ಕೆ ಒಳಗಾಗಿರೋ ವಿಷಯ ಗೊತ್ತಾಗಿದೆ.
ಶಿವಮೊಗ್ಗ: ಕುಂಸಿ ಬಳಿ ರೈಲ್ವೆ ಲೆವೆಲ್ ಕ್ರಾಸಿಂಗ್ ಕಾಮಗಾರಿ ಹಿನ್ನಲೆಯಲ್ಲಿ, ಈ ಸಂಚಾರ ಮಾರ್ಗದಲ್ಲಿ ಬದಲಾವಣೆ
ಈ ಹಿನ್ನಲೆಯಲ್ಲಿ ಪುಲಕೇಶಿ ನಗರ ಪೊಲೀಸ್ ಠಾಣೆಗೆ ತೆರಳಿದಂತ ಅನೇಕರು ಪ್ಯಾನ್, ಆಧಾರ್ ಕಾರ್ಡ್ ಪಡೆದು ವಂಚಿಸಿದ್ದರ ಬಗ್ಗೆ ದೂರು ನೀಡಿದ್ದಾರೆ. ಈ ದೂರು ಸ್ವೀಕರಿಸಿದಂತ ಪೊಲೀಸರು, ಈಗ ಮಹಮ್ಮದ್ ಜೈನ್, ಲೋಕೇಶ್, ಕಾರ್ತಿಕ್, ಮನ್ಸೂರ್, ಮುಜಾಹಿದ್ ಹಫೀಜ್ ಎಂಬುವರನ್ನು ಬಂಧಿಸಿ, ಎಫ್ ಐ ಆರ್ ದಾಖಲಿಸಿ, ತನಿಖೆ ಮುಂದುವರೆಸಿದ್ದಾರೆ. ಹೀಗಾಗಿ ನೀವು ಯಾರ್ ಯಾರೋ ಕೇಳಿದಾಗ ನಿಮ್ಮ ಪಾನ್, ಆಧಾರ್ ಕಾರ್ಡ್ ಕೊಡೋ ಮುನ್ನಾ ಎಚ್ಚರಿಕೆ ವಹಿಸಿ.