ಕರಾಚಿ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿ ಅವರನ್ನ ಪಾಕಿಸ್ತಾನದ ಶಹಬಾಜ್ ಸರ್ಕಾರ ಮತ್ತಷ್ಟು ನಿರ್ಬಂಧಿಸಿದೆ. ಈಗ ಇಮ್ರಾನ್ ಖಾನ್ ಮತ್ತು ಬುಶ್ರಾ ಬೀಬಿ ದೇಶವನ್ನ ತೊರೆಯದಂತೆ ನಿಷೇಧಿಸಲಾಗಿದೆ. ಅವರು ಇನ್ಮುಂದೆ ದೇಶ ತೊರೆಯಲು ಸಾಧ್ಯವಾಗುವುದಿಲ್ಲ. ಕೆಲವು ದಿನಗಳ ಹಿಂದೆ, ಶಹಬಾಜ್ ಸರ್ಕಾರ ಇಮ್ರಾನ್ ಖಾನ್ ಅವರಿಗೆ ಎರಡು ಸ್ಥಳಗಳನ್ನ ನೀಡಿದ್ದು, ಅವರು ಬಯಸಿದರೆ, ದುಬೈ ಅಥವಾ ಲಂಡನ್ಗೆ ಹೋಗಬಹುದಾಗಿತ್ತು, ಆದ್ರೆ, ಸಧ್ಯ ಇದಕ್ಕೆ ವಿರುದ್ಧವಾಗಿ, ಇಮ್ರಾನ್ ಖಾನ್ ಈಗ ದೇಶವನ್ನ ತೊರೆಯದಂತೆ ನಿಷೇಧಿಸಲಾಗಿದೆ.
ಇಮ್ರಾನ್ ಮಾತ್ರವಲ್ಲ, ಅವರ ಪಕ್ಷ ತೆಹ್ರೀಕ್-ಇ-ಇನ್ಸಾಫ್ ಅಂದರೆ ಪಿಟಿಐನ 80 ಸದಸ್ಯರ ಮೇಲೂ ಈ ಕಠಿಣ ಕ್ರಮ ತೆಗೆದುಕೊಳ್ಳಲಾಗಿದೆ. ಪಕ್ಷದ ಈ 80 ಸದಸ್ಯರನ್ನ ನೋ-ಫ್ಲೈ ಪಟ್ಟಿಯಲ್ಲಿ ಸೇರಿಸಲಾಗಿದೆ. ಇಮ್ರಾನ್ ಖಾನ್ ಅವರೊಂದಿಗೆ, ಅವರ ಪತ್ನಿ ಬುಶ್ರಾ ಬೀಬಿ ಕೂಡ ಸರ್ಕಾರದ ನಿಯಮಗಳು ಮತ್ತು ನಿಬಂಧನೆಗಳಲ್ಲಿ ಸಿಲುಕಿದ್ದಾರೆ. ಪಾಕಿಸ್ತಾನದ ಅನೇಕ ಪ್ರಾಂತ್ಯಗಳಲ್ಲಿ 245 ನೇ ವಿಧಿಯನ್ನ ಹೇರುವ ಸರ್ಕಾರದ ನಿರ್ಧಾರವನ್ನ ಇಮ್ರಾನ್ ಖಾನ್ ಅಘೋಷಿತ ಮಾರ್ಷಲ್ ಎಂದು ಬಣ್ಣಿಸಿದ್ದಾರೆ. ಪಾಕಿಸ್ತಾನದ ಸಂವಿಧಾನದ ಅನುಚ್ಛೇದ 245ರ ಅಡಿಯಲ್ಲಿ, ದೇಶವನ್ನ ರಕ್ಷಿಸಲು ಸೈನ್ಯವನ್ನ ನಿಯೋಜಿಸಲಾಗಿದೆ.
BIGG NEWS : ‘ಸ್ಟಾರ್ಟ್ ಅಪ್’ಗಳಲ್ಲಿನ ಹೂಡಿಕೆಗೆ ಏಂಜೆಲ್ ತೆರಿಗೆ ವಿನಾಯಿತಿ ; 21 ದೇಶಗಳಿಗೆ ‘CBDT’ ಸೂಚನೆ
BREAKING NEWS : ಬೆಂಗಳೂರಿನಲ್ಲಿ ‘BMTC’ ಬಸ್ ಮೇಲೆ ಬಿದ್ದ ಬೃಹತ್ ಗಾತ್ರದ ಮರ, ತಪ್ಪಿದ ಭಾರಿ ಅನಾಹುತ