ಇಸ್ಲಮಾಬಾದ್: ಆಸ್ತಿಯನ್ನು ಮರೆಮಾಚಿದ ಆರೋಪದ ಮೇಲೆ ಪಾಕಿಸ್ತಾನದ ಚುನಾವಣಾ ಆಯೋಗವು ಶುಕ್ರವಾರ ಮಾಜಿ ಪ್ರಧಾನಿ ಇಮ್ರಾನ್ ಖಾನ್ ( Pakistan former Prime Minister Imran Khan ) ಅವರನ್ನು ಅನರ್ಹಗೊಳಿಸಿದೆ. ಅವಿಶ್ವಾಸ ಮತದ ಮೂಲಕ ಸಂಸತ್ತು ಖಾನ್ ಅವರನ್ನು ಪದಚ್ಯುತಗೊಳಿಸಿದ ತಿಂಗಳುಗಳ ನಂತರ ಈ ನಿರ್ಧಾರ ಹೊರಬಿದ್ದಿದ್ದು, ಇಮ್ರಾನ್ ಖಾನ್ ಗೆ ಬಿಗ್ ಶಾಕ್ ನೀಡಿದಂತೆ ಆಗಿದೆ.

ಈ ಕ್ರಮವನ್ನು ಖಂಡಿಸಿರುವ ಇಮ್ರಾನ್ ಖಾನ್ ಅವರ ವಕ್ತಾರ ಫವಾದ್ ಚೌಧರಿ, ಪಾಕಿಸ್ತಾನ ಚುನಾವಣಾ ಆಯೋಗವು ರಾಜಧಾನಿ ಇಸ್ಲಾಮಾಬಾದ್ನಲ್ಲಿ ಬಹುನಿರೀಕ್ಷಿತ ತೀರ್ಪನ್ನು ಪ್ರಕಟಿಸಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

BREAKING NEWS ; ಪೋರ್ಟಲ್‍ ಸ್ಲೋ ಹಿನ್ನೆಲೆ ; ಅ.21ರವರೆಗೆ ‘GST ರಿಟರ್ನ್’ ಸಲ್ಲಿಸುವ ಗಡುವು ವಿಸ್ತರಿಸಿದ ‘ಕೇಂದ್ರ ಸರ್ಕಾರ’

ಕಾನೂನು ತಜ್ಞರ ಪ್ರಕಾರ, ಚುನಾವಣಾ ಆಯೋಗದ ತೀರ್ಪಿನ ಅಡಿಯಲ್ಲಿ ಖಾನ್ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ. ಈ ಕ್ರಮವು ದೇಶದಲ್ಲಿ ದೀರ್ಘಕಾಲೀನ ರಾಜಕೀಯ ಪ್ರಕ್ಷುಬ್ಧತೆಯನ್ನು ಆಳಗೊಳಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಒಟ್ಟಾರೆಯಾಗಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪಾಕ್ ಚುನಾವಣಾ ಆಯೋಗವು ( Pakistan’s elections commission ) ಚುನಾವಣೆಗೆ ಸ್ಪರ್ಧಿಸದಂತೆ ಆಜೀವ ನಿಷೇಧ ಹೇರುವ ಮೂಲಕ, ಬಿಗ್ ಶಾಕ್ ನೀಡಲಾಗಿದೆ.

Share.
Exit mobile version