ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಪಾಕಿಸ್ತಾನದ ಪ್ರಥಮ ದರ್ಜೆ ಕ್ರಿಕೆಟಿಗ ಶಹಜಾದ್ ಅಜಮ್ ರಾಣಾ ತಮ್ಮ 36ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು. ಈ ಕ್ರಿಕೆಟಿಗ 95 ಪ್ರಥಮ ದರ್ಜೆ, 58 ಲಿಸ್ಟ್ ಎ ಮತ್ತು 29 ಟಿ 20 ಪಂದ್ಯಗಳನ್ನ ಆಡಿದ್ದಾರೆ.

ಶಹಜಾದ್ ಪ್ರಥಮ ದರ್ಜೆ ಕ್ರಿಕೆಟ್‍ನಲ್ಲಿ 388, ಲಿಸ್ಟ್ ಎನಲ್ಲಿ 81 ಮತ್ತು ಟಿ20 ಕ್ರಿಕೆಟ್‍ನಲ್ಲಿ 27 ವಿಕೆಟ್‍ಗಳನ್ನ ಪಡೆದಿದ್ದಾರೆ.

ದೇಶೀಯ ಕ್ರಿಕೆಟ್‍ನಲ್ಲಿ ಅವರ ಅಸಾಧಾರಣ ಟ್ರ್ಯಾಕ್ ರೆಕಾರ್ಡ್ ಹೊರತಾಗಿಯೂ, ಅಜಮ್ ಅವ್ರನ್ನ ಪಾಕಿಸ್ತಾನಕ್ಕಾಗಿ ಆಡಲು ಎಂದಿಗೂ ಕರೆಯಲಿಲ್ಲ. ರಾಣಾ ಪಾಕಿಸ್ತಾನ ಸೂಪರ್ ಲೀಗ್’ನಲ್ಲಿ ಇಸ್ಲಾಮಾಬಾದ್ ತಂಡವನ್ನು ಪ್ರತಿನಿಧಿಸಿದ್ದರು.

ಆದಾಗ್ಯೂ, ಅವರು 2018ರ ನಂತರ ಪ್ರಥಮ ದರ್ಜೆ ಮತ್ತು ಲಿಸ್ಟ್ ಎ ಪಂದ್ಯವನ್ನು ಆಡಲಿಲ್ಲ.

ಶಹಜಾದ್ 2020 ರಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಮೆರಿಲ್ಬೋನ್ ಕ್ರಿಕೆಟ್ ಕ್ಲಬ್ನೊಂದಿಗೆ ಕೊನೆಯ ಪಂದ್ಯವನ್ನು ಆಡಿದ್ದರು. ಉತ್ತರ ಪಾಕಿಸ್ತಾನ ಪರ ಆಡಿದ ಅವರು 30 ರನ್ ಬಿಟ್ಟುಕೊಟ್ಟು 4 ಓವರ್ ಗಳ ಕೋಟಾದಿಂದ 1 ವಿಕೆಟ್ ಪಡೆದರು.

ಇನ್ನು ಪಾಕಿಸ್ತಾನದ ಮಾಜಿ ಆಟಗಾರ ಮೊಹಮ್ಮದ್ ಹಫೀಜ್ ಅಗಲಿದ ಆತ್ಮಕ್ಕೆ ಗೌರವ ಸಲ್ಲಿಸಿದ್ದಾರೆ.

Share.
Exit mobile version