ಸುಭಾಷಿತ :

Tuesday, April 7 , 2020 8:16 AM

BIGG NEWS : ಪಾಕಿಸ್ತಾನ್ ಜಿಂದಾಬಾದ್ ಘೋಷಣೆ -ಪರಪ್ಪನ ಅಗ್ರಹಾರ ಸೇರಿದ ‘ಅಮೂಲ್ಯ-ಅರುದ್ರಾ’


Friday, February 21st, 2020 9:51 pm

ಬೆಂಗಳೂರು : ಪಾಕ್ ಪರ ಟೌನ್ ಹಾಲ್ ಬಳಿ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಆರುದ್ರಾಳಿಗೆ 6ನೇ ಎಸಿಎಂಎಂ ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ, ಆದೇಶ ಹೊರಡಿಸಿದ್ದಾರೆ.

ಹೌದು, ಮಾರ್ಚ್ 5ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿರುವುದರಿಂದ, ಅಮೂಲ್ಯ ಸೇರಿದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವನ್ನೇ ಆರುದ್ರಾ ಕೂಡ ಸೇರಿದ್ದಾರೆ.

ನಿನ್ನೆ ಫ್ರೀಡಂ ಪಾರ್ಕ್ ನಲ್ಲಿ ಪಾಕಿಸ್ತಾನ್ ಜಿಂದಾಬದ್ ಎಂಬುದಾಗಿ ಕೊಪ್ಪ ಮೂಲಕ ಅಮೂಲ್ಯ ಲಿಯೋನ್ ಘೋಷಣೆ ಕೂಗಿದ್ದರು. ಬಳಿಕ ಯುವತಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ದೇಶ ದ್ರೋಹ ಪ್ರಕರಣದಲ್ಲಿ 14 ದಿನ ನ್ಯಾಯಾಂಗ ಬಂಧನದಲ್ಲಿ ಇರಿಸಿ, ಪರಪ್ಪನ ಅಗ್ರಹಾರ ಜೈಲು ಸೇರಿವಂತೆ ಮಾಡಲಾಗಿತ್ತು.

ಇದೀಗ ಇಂದು ಅದೇ ರೀತಿಯಲ್ಲಿ ಪಾಕ್ ಪರವಾಗಿ ಘೋಷಣೆ ಕೂಗಿದ್ದ ಆರುದ್ರಾ ಅವರನ್ನು ಎಸ್ ಜೆ ಪಾರ್ಕ್ ಪೊಲೀಸರು ಬಂಧಿಸಿ, ಇಂದು 6ನೇ ಎಸಿಎಂಎಂ ನ್ಯಾಯಾಧೀಶರ ಮುಂದೆ ಕೋರಮಂಗಲದ ನಿವಾಸದಲ್ಲಿ ಹಾಜರುಪಡಿಸಿದ್ದರು. ಇದೀಗ ಇಂತಹ ಪಾಕ್ ಪರ ಘೋಷಣೆ ಕೂಗಿದ ಆರುದ್ರಾ ಅವರಿಗೆ ಮಾರ್ಚ್ 5ರ ವರೆಗೆ ನ್ಯಾಯಾಂಗ ಬಂಧನದಲ್ಲಿ ಇರಿಸಿ, ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions