ಸುಭಾಷಿತ :

Monday, February 17 , 2020 5:15 AM

ಎಚ್ಚರ…ಎಚ್ಚರ… ಪ್ಯಾಕೆಟ್ ಹಾಲು ಕುಡಿಯೋ ಮುನ್ನ ದಯವಿಟ್ಟು ಗಮನಿಸಿ…!


Wednesday, January 8th, 2020 9:44 pm

ಸ್ಪೆಷಲ್ ಡೆಸ್ಕ್ : ಹಾಲು ದೇವರು ನೀಡಿದ ಪವಿತ್ರ ನೈಸರ್ಗಿಕ ವರ ಎಂದು ಹೇಳಿದ್ರೂ ತಪ್ಪಾಗಲಿಕ್ಕಿಲ್ಲಾ..! ಹೌದು, ಹಾಲಿನ ಮಹತ್ವ ಅಂಥದ್ದು, ಇನ್ನೂ ಮಕ್ಕಳಿಗೆ ದಯವಿಟ್ಟು ಪೋಷಕರು ಪ್ಯಾಕೆಟ್ ಹಾಲು ಕೊಡಬೇಡಿ.

ಹಾಲು ತುಂಬಾ ದಿನಗಳ ಕಾಲ ಹಾಳಾಗದಂತೆ ಇಡಲು ವಿಷಕಾರಿ ಪ್ರಿಸರ್ವೇಟಿವ್ಸ್ ಮಿಕ್ಸ್ ಮಾಡುತ್ತಿದ್ದಾರೆ. ವರದಿಯೊಂದರ ಪ್ರಕಾರ ದೇಶದ ಹೆಚ್ಚಿನ ದೊಡ್ಡ ಬ್ರಾಂಡೆಡ್ ಕಂಪನಿಗಳ ಪ್ಯಾಕೆಟ್ ಹಾಲು ಸ್ಯಾಂಪಲ್ ಗುಣಮಟ್ಟ ಪರೀಕ್ಷೆಯಲ್ಲಿ ಫೇಲ್ ಆಗಿದೆಯಂತೆ.

ನೀವು ಪ್ಯಾಕೆಟ್ ಹಾಲನ್ನು ಸೇವಿಸುತ್ತಿದ್ದರೆ ಇಲ್ಲಿ ಗಮನಿಸಿ. ಸರ್ಕಾರಿ ಏಜೆನ್ಸಿಗಳು ಮತ್ತು FSSAI ನಡೆಸಿದ ಸಮೀಕ್ಷೆ ಮತ್ತು ಪರೀಕ್ಷೆಯಲ್ಲಿ ಸೇಫ್ ಅಂತ ಸಾಬೀತಾಗಲು ಹಲವು ಕಂಪನಿಗಳ ಪ್ಯಾಕೆಟ್ ಹಾಲಿನ ಬ್ರಾಂಡ್​​​ಗಳು ಫೇಲ್ ಆಗಿವೆ.

ಕೆಚ್ಚಲಿಗೆ ಮಷೀನ್ ಹಾಕಿ ಹನಿಹನಿ ಹಾಲನ್ನ ಎಳೆದು ತೆಗೆಯಲಾಗುತ್ತದೆ. ಬಳಿಕ ಹಾಲನ್ನ ಇಲ್ಲಿಂದ ಅಲ್ಲಿಗೆ, ತರತರಹದ ಕೆಮಿಕಲ್ ಮಿಕ್ಸಿಂಗ್, ಮಾಡಿ ಪ್ಯಾಕ್ ಮಾಡಿದ್ರೆ ಆ ಹಾಲಿನ ಕತೆ ಏನಾಗಲ್ಲ ಹೇಳಿ.

ಹಾಲು ಕಲರ್ ಡಬ್ಬಿಗಳಲ್ಲಿ ಬಂದು ಸೂಪರ್ ಮಾರ್ಕೆಟ್ ಗೆ ಬರುತ್ತದೆ, ನೋಡಲು ಕೂಡ ಆಕರ್ಷಕವಾಗಿ ಕಾಣುತ್ತದೆ. ವರದಿಯ ಪ್ರಕಾರ, ದೇಶದ ಹೆಚ್ಚಿನ ಕಂಪನಿಗಳ ಬ್ರಾಂಡೆಡ್ ಹಾಲು ಆರೋಗ್ಯಕ್ಕೆ ಮಾರಕವಾಗಬಹುದಂತೆ.

ಆಲ್ಫಾಟಾಕ್ಸಿನ್, ಕೀಟನಾಶಕಗಳ ಅಂಶ ನಾವು ನೀವು ಕುಡಿಯುವ ಬ್ರಾಂಡೆಡ್ ಹಾಲಿನಲ್ಲಿ ಕಂಡುಬಂದಿವೆ. ಈ ಕೆಮಿಕಲ್ ಗಳು ನಿಮ್ಮ ಮತ್ತು ನಿಮ್ಮ ಮಕ್ಕಳ ಆರೋಗ್ಯದ ಮೇಲೆ ಮಾರಕ ಪರಿಣಾಮವನ್ನು ಬೀರಬಹುದು.

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions