ಸುಭಾಷಿತ :

Friday, April 3 , 2020 6:55 AM

ಸಾರ್ವಜನಿಕರೇ… ಪ್ಯಾಕೇಜ್ಡ್ ಕುಡಿಯುವ ನೀರು ಕುಡಿಯುವ ಮುನ್ನಾ.. ಈ ಸುದ್ದಿ ತಪ್ಪದೇ ಓದಿ..!


Wednesday, January 29th, 2020 4:31 pm

ರಾಮನಗರ : ಸಾರ್ವಜನಿಕರಿಗೆ ಸುರಕ್ಷತೆ ಹಾಗೂ ಗುಣಮಟ್ಟದ ಆಹಾರ ಒದಗಿಸುವ ಧ್ಯೇಯದಿಂದ 05-08-2011 ರಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಜಾರಿಯಲ್ಲಿರುತ್ತದೆ. ಈ ಕಾಯ್ಡೆಯಡಿಯಲ್ಲಿ ಪ್ಯಾಕೇಜ್ಡ್ ಕುಡಿಯುವ ನೀರು ಸಹ ಆಹಾರವೆಂದು ಪರಿಗಣಿಸಲ್ಪಟ್ಟು ಪ್ಯಾಕೇಜ್ಡ್ ನೀರನ್ನು ತಯಾರಿಸುವ ಘಟಕಗಳು ನೊಂದಣಿ, ಪರವಾನಗಿ ಪಡೆಯಬೇಕಾಗಿರುತ್ತದೆ.

ಪ್ಯಾಕೇಜ್ಡ್ ಕುಡಿಯುವ ನೀರನ್ನು ಉಪಯೋಗಿಸುವ ಗ್ರಾಹಕರು ನೀರನ್ನು ಉಪಯೋಗಿಸುವ ಮೊದಲು ಪ್ಯಾಕೇಜ್ಡ್ ಕುಡಿಯುವ ನೀರಿನ ಕ್ಯಾನ್, ಬಾಟಲಿ, ಕಂಟೇನರ್‌ಗಳ ಮೇಲೆ ಕಡ್ಡಾಯವಾಗಿ ಐ.ಎಸ್.ಐ ಚಿಹ್ನೆ ಹೊಂದಿರುವುದನ್ನು ಮತ್ತು ಪಾರದರ್ಶಕವಾಗಿರುವುದನ್ನು ಗಮನಿಸಬೇಕು. ಲೇಬಲ್‌ಗಳ ಮೇಲೆ ಪ್ಯಾಕ್ ಆದ ದಿನಾಂಕ ಮತ್ತು ಬಳಕೆಯ ಕೊನೆಯ ದಿನಾಂಕ ನಮೂದಿಸಿರಬೇಕು.

ಐ.ಎಸ್.ಐ ಚಿಹ್ನೆ ಇಲ್ಲದಿರುವ ಪ್ಯಾಕೇಜ್ಡ್ ಕುಡಿಯುವ ನೀರನ ತಯಾರಿಕೆ, ಮಾರಾಟ, ದಾಸ್ತಾನು ಮುಂತಾದವುಗಳನ್ನು ಗ್ರಾಹಕರು ಗಮನಿಸಿದರೆ ಸ್ಥಳೀಯ ಅಂಕಿತಾಧಿಕಾರಿ, ಆಹಾರ ಸುರಕ್ಷತಾಧಿಕಾರಿ ಇವರ ಗಮನಕ್ಕೆ ತರುವುದು ಅಥವಾ ಸಹಾಯವಾಣಿ 104ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions