ಕೆಎನ್‌ಎನ್‌ಡಿಜಿಟಲ್‌ಡೆಸ್ಕ್: ವಿಭಿನ್ನ ಟೈಟಲ್ ಹಾಗೂ ವಿಶೇಷ ಕಥಾನಕದ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಕುತೂಹಲದ ಕೋಟೆ ಕಟ್ಟಿದ್ದ ವೀಲ್‌ಚೇರ್ ರೋಮಿಯೋ ಸಿನಿಮಾ ಈ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಗೆ ಭರಪೂರ ಮನರಂಜನೆ ಉಣಬಡಿಸ್ತಿದೆ. ಎಮೋಷನ್ ಕಥೆ ಜೊತೆ ಪಂಚಿಂಗ್ ಡೈಲಾಗ್, ಕಲಾವಿದರ ಉತ್ತಮ ಅಭಿನಯದ ಮೂಲಕ ಸಾಗುವ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಕ್ತಿದೆ.
ಅಂಧ ವೇಶ್ಯೆಯೊಬ್ಬಳನ್ನು ಪ್ರೀತಿಸುವ ವಿಕಲಾಂಗ ರೋಮಿಯೋ ವಿಭಿನ್ನ ಲವ್ ಸ್ಟೋರಿ ಗೆ ಚಿತ್ರರಸಿಕರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಇದೀಗ ಕಾಲಿಲ್ಲದ ರೋಮಿಯೋಗೆ ಪೈಲ್ವಾನ್ ಪವರ್ ತುಂಬಿದ್ದಾರೆ. ಅಂದರೆ ಕಿಚ್ಚ ಸುದೀಪ್ ಹೊಸ ಪ್ರಯತ್ನದ ವಿಭಿನ್ನ ಸ್ಟೋರಿಗೆ ಸಾಥ್ ಕೊಟ್ಟಿದ್ದಾರೆ. ಸಿನಿಮಾ ಬಗ್ಗೆ ಉತ್ತಮ ವಿಮರ್ಶೆ ಬರ್ತಿದೆ. ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದು ಟ್ವೀಟ್ ಮಾಡಿದ್ದಾರೆ.
ಸಂಭಾಷಣೆಗಾರನಾಗಿ ಚಿತ್ರರಂಗದಲ್ಲಿನ ಒಂದಷ್ಟು ವರ್ಷಗಳ ಕಾಲ ದುಡಿದ ನಟರಾಜ್, ಕಥೆಗೆ ಒಳ್ಳೆ ಟ್ರೀಟ್ ಮೆಂಟ್ ಕೊಟ್ಟಿದ್ದು, ಅದ್ಭುತವಾಗಿ ಇಡೀ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಗುರು ಕಶ್ಯಪ್ ಅದಕ್ಕೆ ತಕ್ಕುದಾದ ಸಂಭಾಷಣೆ ಒದಗಿಸಿದ್ದಾರೆ. ರಾಮ್ ಚೇತನ್ ಮೊದಲ ಅಭಿನಯವಾದ್ರೂ ಮಾಗಿದ ನಟನೆ, ಮಯೂರಿ ಅಮೋಘ ಪಾತ್ರ ಪೋಷಣೆ ಮಾಡಿದ್ರೆ, ರಂಗಾಯಣ ರಘು, ತಬಲನಾಣಿ, ಸುಚೇಂದ್ರ ಪ್ರಸಾದ್ ಎಂದಿನಂತೆ ತಮ್ಮ ಪಾತ್ರಗಳ ಮೂಲಕ ಜೀವಿಸಿದ್ದಾರೆ. ಭರತ್ ಬಿಜೆ ಸಂಗೀತ ಇಂಪು, ಸಂತೋಷ್ ಪಾಂಡಿ ಕ್ಯಾಮೆರಾ ತಂಪು ಸಿನಿಮಾಕ್ಕಿದ್ದು, ಇಂತಹ ಒಳ್ಳೆ ಕಥೆಗೆ ಬಂಡವಾಳ ಹೂಡುವ ಮೂಲಕ ತಿಮ್ಮಪ್ಪ ವೆಂಕಟಾಚಲಯ್ಯ ಸದಾಭಿರುಚಿ ಸಿನಿಮಾ ನಿರ್ಮಾಪಕ ಅನ್ನೋದನ್ನು ಸಾಬೀತುಪಡಿಸಿದ್ದಾರೆ.
My best wshs to the team of #WheelChairRomeo..
Hearing good reviews 🥂🥂@Ramchethann @mayuri_kyatari4— Kichcha Sudeepa (@KicchaSudeep) May 29, 2022