ಒಡಿಶಾ: ಕೊರೋನಾ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಂತ ಅಕ್ಷರ ಸೇವೆಯ ಮೂಲಕ ತಮ್ಮನ್ನು ಗುರ್ತಿಸಿಕೊಂಡಿದ್ದಂತ ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ನಂದಾ ಮಾಸ್ಟರ್ ( ನಂದಕಿಶೋರ್ ಪ್ರಸ್ಟಿ – Padma Shri Nanda Sir ) ಅವರು ಇಂದು, ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
ಒಡಿಶಾದ ಜೈಪುರ ಜಿಲ್ಲೆಯ ಕಂಠೀರ ಗ್ರಾಮದಲ್ಲಿ ಜನಿಸಿದ್ದಂತ ನಂದ ಕಿಶೋರ್ ಪ್ರಸ್ಟಿ, ಲಕ್ಷಾಂತರ ಬಡವರಿಗೆ ಅಕ್ಷರ ದಾನದ ಮೂಲಕ ನಂದಾ ಮಾಸ್ಟರ್ ಎಂಬುದಾಗಿಯೇ ಪ್ರಸಿದ್ಧಿ ಗಳಿಸಿದ್ದರು. ಈ ಬಾರಿ ಅವರ ಅಕ್ಷರ ಸೇವೆಗೆ ಪದ್ಮಶ್ರೀ ಪ್ರಶಸ್ತಿ ಕೂಡ ಸಂದಿತ್ತು.
Vatal Nagaraj: ಕೊರೋನಾ ಹೆಚ್ಚಾಗುತ್ತಿರೋದ್ರಿಂದ ‘ಶಾಲಾ-ಕಾಲೇಜು’ಗಳಿಗೆ ರಜೆ ಘೋಷಿಸಿ – ವಾಟಾಳ್ ನಾಗರಾಜ್ ಆಗ್ರಹ
ಹೀಗೆ ಅಕ್ಷರ ಸೇವೆಯಲ್ಲಿಯೇ ತುಂಬು ಜೀವನವನ್ನು ಕಳೆದಂತ ನಂದಾ ಸಾರ್ ನವೆಂಬರ್ 30ರಂದು ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಂತ ಅವರು, ಇಂದು ಚಿಕಿತ್ಸೆ ಫಲಕಾರಿಯಾಗದೇ ಇನ್ನಿಲ್ಲವಾಗಿದ್ದಾರೆ.