ಸುಭಾಷಿತ :

Monday, April 6 , 2020 9:25 PM

ಈ ಟಿಪ್ಸ್ ಅನುಸರಿಸಿ… ಅಂಡಾಣುವಿನ ಗುಣಮಟ್ಟವನ್ನು ಹೆಚ್ಚಿಸಿ, ಫಲವತ್ತತೆ ಗಳಿಸಿ.!


Monday, February 24th, 2020 2:20 pm

ಗರ್ಭ ಧರಿಸಲು, ಪುರುಷರ ವೀರ್ಯಾಣು ಎಷ್ಟು ಗುಣಮಟ್ಟದಿಂದ ಕೂಡಿರುತ್ತೋ.. ಅಷ್ಟೇ ಗುಣಮಟ್ಟದಿಂದ ಮಹಿಳೆಯರ ಅಂಡಾಣು ಕೂಡ ಗುಣಮಟ್ಟದಿಂದ ಕೂಡಿರಬೇಕು. ಆದ್ರೇ.. ಕೆಲವೊಮ್ಮೆ ಮಹಿಳೆಯರ ದೈಹಿಕ ಸಮಸ್ಯೆಗಳು, ಕೆಟ್ಟ ಅಭ್ಯಾಸಗಳಿಂದಾಗಿ ಅಂಡಾಣುವಿನ ಗುಣಮಟ್ಟ ಕಳೆದುಕೊಂಡಿರುವತ್ತದೆ. ಇಂತಹ ಮಹಿಳೆಯರ ಅಂಡಾಣು ಗುಣಮಟ್ಟವನ್ನು ಹೆಚ್ಚಿಸಲು ಈ ಕೆಳಗಿನ ಟಿಪ್ಸ್ ಗಳನ್ನು ಅನುಸರಿಸಿದ್ರೇ.. ಖಂಡಿತವಾಗಿ ಅಂಡಾಣುವಿನ ಗುಣಮಟ್ಟ ಹೆಚ್ಚಿ, ಗರ್ಭ ಧರಿಸಲು ಕಾರಣವಾಗುತ್ತದೆ..

ಗರ್ಭ ಧಾರಣೆ ಅಂದ್ರೇ.. ಅದೊಂದು ತಪಸ್ಸು.. ಅದೊಂದು ಮಹಿಳೆಗೆ ದೊರಕುವ ದೊಡ್ಡ ಸೌಭಾಗ್ಯ ಎಂದೇ ಹೇಳಲಾಗುತ್ತದೆ. ಈ ಗರ್ಭ ಧರಿಸುವ ಸಾಮರ್ಥ್ಯಕ್ಕೆ ಪುರುಷರು, ಮಹಿಳೆಯರ ದೈಹಿಕ ಗುಣಮಟ್ಟ ಫವರ್ ಪುಲ್ ಆಗಿರಬೇಕಾಗಿರುತ್ತದೆ. ಅದರಲ್ಲೂ ಅಂಡಾಣು-ವೀರ್ಯಾಣುಗಳ ಪಾತ್ರ ಬಹುಮುಖ್ಯವಾದದ್ದು. ಪುರುಷರ ವೀರ್ಯಾಣು ಗುಣಮಟ್ಟವಾಗಲೀ, ಮಹಿಳೆಯರ ಅಂಡಾಣುವಿನ ಗುಣಮಟ್ಟವಾಗಲೀ ಕಡಿಮೆ ಆದ್ರೇ.. ಗರ್ಭ ಧರಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಮೂಲಕ ಮಕ್ಕಳಾಗದೇ ಬಂಜೆತನಕ್ಕೂ ಕಾರಣವಾಗುತ್ತದೆ.

ಈ ಎಲ್ಲಾ ಕಾರಣದಿಂದಾಗಿ ಮಹಿಳೆಯರ ಅಂಡಾಣುವಿನ ಸಾಮರ್ಥ್ಯವನ್ನು, ಗುಣಮಟ್ಟವನ್ನು ಹೆಚ್ಚಿಸಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ. ಗರ್ಭ ಧರಿಸುವ ಸಾಮರ್ಥ್ಯವನ್ನು ಗಳಿಸಿ.

  • ಮಾನಸಿಕ ಒತ್ತಡವನ್ನು ನಿಯಂತ್ರಣ ಮಾಡುವ ಮೂಲಕ, ಮೆದುಳಿನಲ್ಲಿ ಉತ್ಪತ್ತಿಯಾಗುವ ಕಾರ್ಚಿಸೋಲ್ ಎಂಬ ರಸದೂತವನ್ನು ನಿಯಂತ್ರಣಕ್ಕೆ ತರುವ ಮೂಲಕ ಅಂಡಾಣು ಗುಣಮಟ್ಟ ಹೆಚ್ಚಿಸಿಕೊಳ್ಳಿ. ಇದಕ್ಕಾಗಿ ಧ್ಯಾನ, ಯೋಗಾಸನ, ವ್ಯಾಯಾಮ, ಬೆಚ್ಚಗಿನ ಸ್ನಾನದ ನೀರಿನಲ್ಲಿ ಸ್ನಾನ ಮಾಡೋದು ಮರೆಯಬೇಡಿ.
  • ಆಹಾರ ಸೇವನೆಯು ಆರೋಗ್ಯಕರವಾಗಿರಲಿ. ಸೊಪ್ಪು, ತರಕಾರಿ, ದ್ವಿದಳ ಧಾನ್ಯಗಳು ಸೇರಿದಂತೆ ಹಣ್ಣುಗಳ ಸೇವನೆ ಮೂಲಕ ಅಂಡಾಣು ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಿ.
  • ಚೆನ್ನಾಗಿ ನೀರು ಕುಡಿಯಿರಿ – ಹೌದು.. ನೀವು ದಿನಕ್ಕೆ ಎಂಟು ಲೋಟಕ್ಕೂ ಕಡಿಮೆ ಇಲ್ಲದಂತೆ ಕುಡಿಯಿರಿ. ಇದರಿಂದಾಗಿ ರಕ್ತ ಪರಿಚಲನೆ ಉತ್ತಮಗೊಂಡು, ಆರೋಗ್ಯಕರ ಅಂಡಾಣು ಬಿಡುಗಡೆಯಲ್ಲಿ ಸಹಕಾರಿಯಾಗುತ್ತದೆ.
  • ಮಾಧಯ ವ್ಯಸನ, ಧೂಮಪಾನ, ಮಧ್ಯಪಾನದಿಂದ ದೂರವಿರಿ – ಮಹಿಳೆಯರ ಗರ್ಭ ಧರಿಸುವ ಸಾಮರ್ಥ್ಯದ ಮೇಲೆ ನೇರವಾಗಿ ಪರಿಣಾಮ ಬೀರೋದು. ನಿಮ್ಮ ದುಶ್ಚಟಗಳ ದುರಭ್ಯಾಸಗಳು. ಹೀಗಾಗಿ ಈ ದುರಭ್ಯಾಸಗಳನ್ನು ವರ್ಜಿಸಿ. ಧೂಮಪಾನವಂತೂ ಮಾಡಲೇ ಬೇಡಿ. ಇದು ಅಂಡಾಶಯಗಳಲ್ಲಿನ ಅಂಡಾಣುಗಳನ್ನು ಶಾಶ್ವತವಾಗಿ ನಷ್ಟಪಡಿಸುತ್ತದೆ. ಮಧ್ಯಪಾನದಿಂದ ದೂರವಿರೋದು ಕೂಡ ಮರೆಯಬೇಡಿ.

ಈ ಎಲ್ಲಾ ಮೇಲಿನ ಆರೋಗ್ಯಕರ ಟಿಪ್ಸ್ ಗಳನ್ನು ಅಳವಡಿಸಿಕೊಂಡು. ಮಹಿಳೆಯರು ಗರ್ಭ ಧರಿಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ. ಯೋಗಾಸನ, ಉತ್ತಮ ಆಹಾರ ಸೇವನೆ, ಹಣ್ಣು-ತರಕಾರಿಗಳ ಸೇವನೆಯಂದ ಕ್ರಮಗಳನ್ನು ಅನುಸರಿಸುತ್ತಾ, ಮಹಿಳೆಯರ ಅಂಡಾಣುವಿನ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಿ. ಗರ್ಭ ಧರಿಸಿ, ಮಕ್ಕಳ ಸಂತಾವನ್ನು ಪಡೆಯಿರಿ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Gadgets
State
Astrology
Cricket Score
Poll Questions