ಮ್ಯಾಡ್ರಿಡ್ (ಸ್ಪೇನ್): ಕಳೆದ 10 ದಿನಗಳಲ್ಲಿ ಸ್ಪೇನ್ ದೇಶದ ಹಲವು ಭಾಗಗಳಲ್ಲಿ ತಾಪಮಾನವು 40 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದ್ದರಿಂದ ಈ ವರ್ಷದ ಎರಡನೇ ಶಾಖದ ಅಲೆಯಲ್ಲಿ 1,047 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಪೇನ್‌ನ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.

ಮಾನಿಟರೈಸೇಶನ್ ಆಫ್ ಡೈಲಿ ಮಾರ್ಟಲಿಟಿ (MoMo) ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಈ ಶಾಖ ಸಂಬಂಧಿತ ಸಾವುಗಳನ್ನು ಜುಲೈ 10 ರಿಂದ 19 ರವರೆಗೆ ದಾಖಲಿಸಲಾಗಿದೆ. ತೀವ್ರವಾದ ಶಾಖವು ಮುಖ್ಯವಾಗಿ ವಯಸ್ಸಾದವರ ಮೇಲೆ ಪರಿಣಾಮ ಬೀರಿದೆ.

ಸ್ಪ್ಯಾನಿಷ್ ಹವಾಮಾನ ಸಂಸ್ಥೆಯ (AEMET) ವಕ್ತಾರರಾದ ಬೀ ಹೆರ್ವೆಲ್ಲಾ, ಉಸಿರಾಟ ಮತ್ತು ಹೃದಯರಕ್ತನಾಳದ ಕಾಯಿಲೆಗಳಿರುವ ಜನರಲ್ಲಿ ಮರಣ ಪ್ರಮಾಣ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಹರ್ವೆಲ್ಲಾ ಈ ಸಮಸ್ಯೆಯು ಮುಖ್ಯವಾಗಿ ದೇಹದ ತಾಪಮಾನ ನಿಯಂತ್ರಣ ಕಾರ್ಯವಿಧಾನದಲ್ಲಿದೆ ಎಂದು ನಂಬುತ್ತಾರೆ. ಇದು ಯುವ ಜನರಲ್ಲಿ ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿಲ್ಲ. ಆದರೆ, ವಯಸ್ಸಾದವರಲ್ಲಿ ಹೆಚ್ಚಾಗಿ ಪರಿಣಾಮ ಬೀರಿದೆ ಎಂದಿದ್ದಾರೆ.

“ಶಾಖ ಮತ್ತು ನಿರ್ಜಲೀಕರಣದ ಪರಿಣಾಮಗಳು ಶಾಖಕ್ಕೆ ಒಡ್ಡಿಕೊಂಡ ಗಂಟೆಗಳ ನಂತರ ನಿಮ್ಮ ಮೇಲೆ ಪರಿಣಾಮ ಬೀರಬಹುದು” ಎಂದು ಮ್ಯಾಡ್ರಿಡ್‌ನ ಟೊರೆಜೊನ್ ಆಸ್ಪತ್ರೆಯ ತುರ್ತು ಸೇವೆಗಳ ಮುಖ್ಯಸ್ಥ ಪಾಲ್ ಮೊಲಿನಾ ಹೇಳಿದರು.

BREAKING NEWS: ಬೆಳಗಾವಿಯಲ್ಲಿ ಪ್ರೇಯಸಿಯನ್ನ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಪಾಗಲ್ ಪ್ರೇಮಿ

Shocking news:‌ ಅತಿಥಿಗಳಾಗಿ ಬಂದು ಪ್ರಾಣ ತೆಗೆದ ಹಂತಕರು: ಫ್ಲ್ಯಾಟ್​ನಲ್ಲಿ ಮಹಿಳಾ ಪೇದೆ, ತಾಯಿ, ಮಗಳ ಶವ ಪತ್ತೆ

Share.
Exit mobile version