ತುಮಕೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಘಟನೆ ಹಸಿಯಾಗಿರೋ ಮುನ್ನವೇ, ಇಂದು ತುಮಕೂರಿನಲ್ಲಿ ಖಾಸಗಿ ಬಸ್ ನಲ್ಲಿ ಶೌಚಾಲಯಕ್ಕೆ ಬಳಸುವ ಆ್ಯಸಿಡ್ ಬಾಟಲ್ ಸ್ಪೋಟಗೊಂಡಿದೆ. ಈ ಘಟನೆಯಲ್ಲಿ 10ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರೋ ಘಟನೆ ನಡೆದಿದೆ.

ತುಮಕೂರಿನಿಂದ ಕುಣಿಗಲ್ ಗೆ ಪ್ರಯಾಣಿಸುತ್ತಿದ್ದಂತ ಗೊಳೂರು ಸಮೀಪದ ಗಣಪತಿ ಅನ್ನೋ ಬೋರ್ಡ್ ಹೊಂದಿದ್ದಂತ ಖಾಸಗಿ ಬಸ್ಸಿನಲ್ಲಿ ನಿಗೂಢ ಸ್ಪೋಟವೊಂದು ಸಂಭವಿಸಿದೆ. ಈ ಘಟನೆಯಲ್ಲಿ 10ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಅಂದಹಾಗೇ ಖಾಸಗಿ ಬಸ್ ನಲ್ಲಿ ಸಂಭವಿಸಿದಂತ ಸ್ಪೋಟಕಕ್ಕೆ ಟಾಯ್ಲೆಟ್ ಗೆ ಬಳಸುವಂತ ಆ್ಯಸಿಡ್ ಬಾಟಲಿ ಸ್ಪೋಟವೇ ಕಾರಣ ಎನ್ನಲಾಗುತ್ತಿದೆ. ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಂತ ಮಹಿಳೆಯೊಬ್ಬರು ತನ್ನೊಂದಿಗೆ ಆ್ಯಸಿಡ್ ಬಾಟಲಿ ಕೊಂಡೊಯ್ಯುತ್ತಿದ್ದಾಗ ಅದು ಸ್ಪೋಟಗೊಂಡು ಈ ದುರಂತ ಸಂಭವಿಸಿದೆ ಎನ್ನಲಾಗುತ್ತಿದೆ.

ಈ ವಿಷಯ ತಿಳಿದು ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

BREAKING : ‘ನೀಟ್ ಪಿಜಿ ಪರೀಕ್ಷೆ’ ಮುಂದೂಡಿಕೆ, ಹೊಸ ‘ವೇಳಾಪಟ್ಟಿ’ ಹೀಗಿದೆ! |NEET PG 2024 exam

5, 8, 9, 11ನೇ ತರಗತಿ ‘ಬೋರ್ಡ್ ಪರೀಕ್ಷೆ’ಗೆ ‘ಹೈಕೋರ್ಟ್ ಅನುಮತಿ’ ನೀಡಿಲ್ಲ: ‘ಶಿಕ್ಷಣ ಇಲಾಖೆ’ ಸ್ಪಷ್ಟನೆ

Share.
Exit mobile version