ಉತ್ತರಕನ್ನಡ : ಮತಗಟ್ಟೆ ಕೇಂದ್ರದಲ್ಲಿ ‘ನಮ್ಮ ಮತ ನಮ್ಮ ಹಕ್ಕು’ ಬದಲು ‘ನಮ್ಮ ಹಕ್ಕು ನಮ್ಮ ಶಕ್ತಿ’ ಬರೆದಿದ್ದಕ್ಕೆ ಚುನಾವಣಾಧಿಕಾರಿಗೆ ಶಾಸಕ ದಿನಕರ ಶೆಟ್ಟಿ ತರಾಟೆಗೆ ತೆಗೆದುಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಗಿಬ್ ಅಂಗ್ಲಮಾಧ್ಯಮ ಶಾಲೆಯ ಮತಗಟ್ಟೆಯಲ್ಲಿ ನಡೆದಿದೆ.

ಲೋಕಸಭಾ ಚುನಾವಣೆಗೆ 2ನೇ ಹಂತದ ಮತದಾನ ಹಿನ್ನೆಲೆ ಇಂದು ಕುಮಟಾ ಪಟ್ಟಣ ಗಿಬ್ ಅಂಗ್ಲಮಾಧ್ಯಮ ಶಾಲೆ ಮತಗಟ್ಟೆಗೆ ಮತ ಚಲಾಯಿಸಲು ಬಂದಿದ್ದ ಶಾಸಕ. ಈ ವೇಳೆ ಗೋಡೆಯ ಮೇಲೆ “ನಮ್ಮ ಮತ ನಮ್ಮ ಶಕ್ತಿ’ ಬರೆಹ ಕಂಡು ಸಿಡಿಮಿಡಿಗೊಂಡಿದ್ದಾರೆ. ತಕ್ಷಣ ಚುನಾವಣಾ ಸಿಬ್ಬಂದಿಗಳಿಗೆ ಕರೆದು ಬರಹದ ಮೇಲೆ ಪೋಸ್ಟರ್ ಅಂಟಿಸಿ ಮರೆಮಾಚಿಸಿದ್ದಾರೆ.

ಮತಗಟ್ಟೆಯ ಗೋಡೆಯ ಮೇಲೆ ಈ ರೀತಿ ಬರೆಯುವಂತೆ ಹೇಳಿದವರು ಯಾರು? ಶಕ್ತಿ ಎಂಬ ಪದ ಯಾಕೆ ಬಳಕೆ ಮಾಡಿದ್ದೀರಿ? ಶಕ್ತಿ ಎನ್ನುವುದು ಗ್ಯಾರಂಟಿ ಯೋಜನೆಗಳಲ್ಲಿ ಒಂದು ಎಂಬುದು ನಿಮಗೆ ತಿಳಿದಿಲ್ಲವೇ? ಮತಗಟ್ಟೆಯಲ್ಲಿ ಈ ರೀತಿ ಬಹಳ ದೊಡ್ಡದಾಗಿ ಬರೆದಿರುವುದು ನನಗೆ ಅಸಮಾಧಾನ ತಂದಿದೆ ಎಂದು ಸಿಟ್ಟಾದರು. ಈ ವೇಳೆ ಡಿಸಿ ಅನುಮತಿ ಪಡೆದು ಬರೆದಿದ್ದಾಗಿ ಚುನಾವಣಾಧಿಕಾರಿ ತಿಳಿಸಿದಾಗ ಸುಮ್ಮನಾಗದ ಶಾಸಕರು ಬರಹವನ್ನು ಮರೆ ಮಾಚಿಸಿದರು.

Share.
Exit mobile version