ಕೆಎನ್ಎನ್ ಡಿಜಿಟಲ್ ಡೆಸ್ಕ್ : ವಿರೋಧ ಪಕ್ಷಗಳು ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ಆದರೆ ಆರ್‌ಎಸ್‌ಎಸ್-ಬಿಜೆಪಿ ವಿರುದ್ಧ ಒಗ್ಗಟ್ಟಾಗಿ ನಿಲ್ಲುತ್ತವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ್ ಜೋಡೊ ಯಾತ್ರೆಯು ಭಾರತದ ರಾಜಕೀಯದ ಮೇಲೆ ಪರಿಣಾಮ ಬೀರುತ್ತದೆ.ಅದು ಏನಾಗುತ್ತದೆ ಎಂದು ನಾನು ಈಗ ಹೇಳಲಾರೆ ಎಂದೇಳಿದ್ದಾರೆ.
ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನತೆಯ ಕುರಿತು ಮಾತನಾಡಿದ ಅವರು, ಚೀನೀಯರು ನಮ್ಮ ಭೂಮಿಯನ್ನು ವಶಪಡಿಸಿಕೊಂಡಿದ್ದಾರೆ ಎಂದು ನಿರಾಕರಿಸುವ ಸರ್ಕಾರದ ಧೋರಣೆ ಅತ್ಯಂತ ಅಪಾಯಕಾರಿ. ಇದು ಹೆಚ್ಚು ಆಕ್ರಮಣಕಾರಿ ಕೆಲಸಗಳನ್ನು ಮಾಡಲು ಅವರಿಗೆ ಹೆಚ್ಚಿನ ವಿಶ್ವಾಸವನ್ನು ನೀಡುತ್ತದೆ. ನಾವು ಚೀನಿಯರೊಂದಿಗೆ ದೃಢವಾಗಿ ವ್ಯವಹರಿಸಬೇಕು. ಅವರು ನಮ್ಮ ಭೂಮಿಯಲ್ಲಿ ಕುಳಿತಿದ್ದಾರೆ ಎಂದು ಅವರಿಗೆ ಹೇಳಬೇಕು ಎಂದು ಹೇಳಿದ್ದಾರೆ.
2000 ಚದರ ಕಿ.ಮೀ ಭಾರತೀಯ ಭೂಪ್ರದೇಶವನ್ನು ಚೀನಾ ವಶಪಡಿಸಿಕೊಂಡಿದೆ ಎಂದು ಲಡಾಕಿ ನಿಯೋಗ ಸ್ಪಷ್ಟವಾಗಿ ಹೇಳಿದೆ. ಭಾರತದಲ್ಲಿದ್ದ ಹಲವು ಗಸ್ತು ಕೇಂದ್ರಗಳು ಈಗ ಚೀನಾದ ಕೈಯಲ್ಲಿ ಭದ್ರವಾಗಿವೆ ಎಂದು ಅವರು ಹೇಳಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆ ಅಂತಿ ದಿನವನ್ನು ತಲುಪಿದೆ. ನಾಳೆ ಶ್ರೀನಗರಲ್ಲಿ ಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ. ಸಮಾರಂಭದಲ್ಲಿ 12ಕ್ಕೂ ಹೆಚ್ಚು ವಿರೋಧ ಪಕ್ಷಗಳು ಭಾಗಿಯಾಗಲಿವೆ ಎಂದು ಕಾಂಗ್ರೆಸ್ ಮಾಹಿತಿ ನೀಡಿದೆ.
ಕಳೆದ ವರ್ಷ ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾದ ಯಾತ್ರೆಯು 4,080 ಕಿಲೋಮೀಟರ್ ದೂರವನ್ನು ಕ್ರಮಿಸಿ ಇಂದು ಬೆಳಿಗ್ಗೆ ಶ್ರೀನಗರ ತಲುಪಿದೆ. ದೇಶದ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹರಡಿರುವ 75 ಜಿಲ್ಲೆಗಳನ್ನು ಯಾತ್ರೆ ನಡೆದಿದೆ.
ಕಾಶ್ಮೀರದಲ್ಲಿ ಪರಿಸ್ಥಿತಿ ಚೆನ್ನಾಗಿದ್ರೆ ‘ಅಮಿತ್ ಶಾ’ ಇಲ್ಲಿಗೆ ನಡೆದುಕೊಂಡು ಬರಲಿ ; ರಾಹುಲ್ ಗಾಂಧಿ
ಮಹಿಳಾ ಸಹೋದ್ಯೋಗಿಯನ್ನು ಗುಂಡಿಕ್ಕಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಕಾನ್ಸ್ಟೇಬಲ್