ಆಪರೇಷನ್ ಕೆಲ್ಲರ್: ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆಯ ಎನ್ ಕೌಂಟರ್ ಗೆ ಮೂವರು ಉಗ್ರರು ಬಲಿ

ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಶೂಕಲ್ ಕೆಲ್ಲರ್ ಮೇಲೆ ಮಂಗಳವಾರ (ಮೇ 13) ಭಾರತೀಯ ಸೇನೆ ಭಯೋತ್ಪಾದಕರ ವಿರುದ್ಧ ಬೃಹತ್ ಕಾರ್ಯಾಚರಣೆ ನಡೆಸಿತು. ಈ ಆಪರೇಷನ್ ಕೆಲ್ಲರ್ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಭಾರತೀಯ ಸೇನೆಯು ಹೊಡೆದುರುಳಿಸಿದೆ. ರಾಷ್ಟ್ರೀಯ ರೈಫಲ್ಸ್ ಘಟಕವು ಒದಗಿಸಿದ ಗುಪ್ತಚರ ವರದಿಯ ಮೇರೆಗೆ ಬೆಳಿಗ್ಗೆ ಭಾರತೀಯ ಸೇನೆ ಮತ್ತು ಸ್ಥಳೀಯ ಭದ್ರತಾ ಪಡೆಗಳನ್ನು ಒಳಗೊಂಡ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಪರಿಸ್ಥಿತಿ ಶೀಘ್ರವಾಗಿ ಉಲ್ಬಣಗೊಂಡಿತು ಮತ್ತು ಎರಡೂ ಕಡೆಯಿಂದ ಭಾರೀ ಗುಂಡಿನ ಚಕಮಕಿ ನಡೆಯಿತು. … Continue reading ಆಪರೇಷನ್ ಕೆಲ್ಲರ್: ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆಯ ಎನ್ ಕೌಂಟರ್ ಗೆ ಮೂವರು ಉಗ್ರರು ಬಲಿ