ಪೇಟಿಎಂ ಬಳಕೆದಾರರೇ ಎಚ್ಚರ.. ಎಚ್ಚರ.! ನಿಮ್ಗೆ ಯಾರಾದ್ರೂ ಹೀಗೆ ಕರೆಮಾಡಿದ್ರೆ.. ಹುಷಾರ್.! – Kannada News Now


State

ಪೇಟಿಎಂ ಬಳಕೆದಾರರೇ ಎಚ್ಚರ.. ಎಚ್ಚರ.! ನಿಮ್ಗೆ ಯಾರಾದ್ರೂ ಹೀಗೆ ಕರೆಮಾಡಿದ್ರೆ.. ಹುಷಾರ್.!

ಬೆಂಗಳೂರು : ಗೂಗಲ್ ಪೇ, ಪೋನ್ ಪೇ ಜೊತೆ ಜೊತೆಗೆ ಪೇಟಿಎಂ ಇಂದು ನಾವು ನೀವೆಲ್ಲಾ ಬಳಕೆ ಮಾಡ್ತಾ ಇದ್ದೇವೆ. ಆದ್ರೇ ಇದನ್ನೇ ಬಂಡವಾಳವಾಗಿ ಮಾಡಿಕೊಂಡಿರುವಂತ ಸೈಬರ್ ಕ್ರೈಂ ಕಳ್ಳರು, ನಿಮ್ಮ ಖಾತೆಗೆ ಕನ್ನ ಹಾಕೋದಕ್ಕೆ ಆರಂಭಿಸಿದ್ದಾರೆ. ಅದರಲ್ಲೂ ಪೇಟಿಯಂ ಮೂಲಕ ನಿಮ್ಮ ಖಾತೆಗೆ ಧೋಖಾ ಆರಂಭಿಸೋದು ಶುರುವಾಗಿದೆ. ಪೇಟಿಎಂ ಕೈವೈಸಿ ಮಾಡಬೇಕು ಎಂಬುದಾಗಿ ಕರೆಮಾಡುವ ಚೋರರು ನಿಮ್ಮ ಖಾತೆಗೆ ಸದ್ದಿಲ್ಲದೇ ಕನ್ನ ಹಾಕುತ್ತಿದ್ದಾರೆ..

ಹೌದು.. ಪೇಟಿಎಂ ಕೆವೈಸಿ ಮಾಡಬೇಕು ಎಂಬುದಾಗಿ ಕರೆ ಮಾಡುವಂತ ಆನ್ ಲೈನ್ ಚೋರರು, ನಿಮ್ಮ ಖಾತೆಯ ಮಾಹಿತಿ ಪಡೆದು, ನಿಮ್ಮ ಖಾತೆಗೆ ಕನ್ನ ಹಾಕುತ್ತಿದ್ದಾರೆ. ಹೀಗೆ ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಕರೆ ಮಾಡಿ, ಮಾಹಿತಿ ಪಡೆದು ಹಾಕಿದ್ದು ಮಾತ್ರ ಬರೋಬ್ಬರಿ 1.74 ಲಕ್ಷ ರೂಪಾಯಿ ಆಗಿದೆ.

ಜೆಪಿ ನಗರ ನಿವಾಸಿಯಾದಂತ ಭೀಮಸಿಂಹ ಎಂಬುವರೇ ಹೀಗೆ ಹಣ ಕಳೆದುಕೊಂಡವರಾಗಿದ್ದಾರೆ. ಇವರಿಗೆ ಅಕ್ಟೋಬರ್ 12ರಂದು ಕೆರಮಾಡಿದಂತ ಅಪರಿಚಿತ ವ್ಯಕ್ತಿಯೊಬ್ಬ, ಪೇಟಿಎಂ ನಿಂದ ಕರೆ ಮಾಡಲಾಗುತ್ತಿದೆ, ನಿಮ್ಮ ಪೇಟಿಎಂ ಕೆವೈಸಿ ಅಪ್ ಡೇಟ್ ಮಾಡಬೇಕಿದೆ. ನಿಮಗೊಂದು ಲಿಂಕ್ ಕಳಿಸಲಾಗಿದೆ. ಅದನ್ನು ಕ್ಲಿಕ್ ಮಾಡಿ ಆಪ್ ಒಂದನ್ನು ನಿಮ್ಮ ಮೊಬೈಲ್ ನಲ್ಲಿ ಹಾಕೊಳ್ಳಿ, ಆನಂತ್ರ ಸರ್ವಿಸ್ ಚಾರ್ಚ್ ಎನ್ನುವಂತೆ 5 ರೂಪಾಯಿ ಕಳಿಸಿಕೊಡುವಂತೆ ತಿಳಿಸಿದ್ದಾರೆ.

ಅಪರಿಚಿತ ಆನ್ ಲೈನ್ ಚೋರರು ಹೇಳಿದಂತೆ ಮಾಡಿದ ಭೀಮಸಿಂಹ ಅವರು, 5 ರೂಪಾಯಿ ಕಳಿಸಿದ ನಂತ್ರ, ಅವರ ಬ್ಯಾಂಕ್ ಖಾತೆಯಿಂದ ಬರೋಬ್ಬರಿ 1.74 ಲಕ್ಷ ಕನ್ನಹಾಕಿದ್ದಾರೆ. ಹೀಗೆ ಕನ್ನ ಹಾಕಿದ್ದಾರೆ, ವಾಪಾಸ್ ಕೊಡಿಸಿ ಎಂಬುದಾಗಿ ದಕ್ಷಿಣ ಸಿಇಎನ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸೋ ಎಚ್ಚರ ಎಚ್ಚರ.. ಯಾವುದೇ ಅಪರಿಚಿತರು ನಿಮ್ಮ ಯಾವುದೇ ಆನ್ ಲೈನ್ ವರ್ಗಾವಣೆ ಆಪ್ ನ ಮಾಹಿತಿ ಪಡೆದ್ರೂ ಕೊಡೋದಕ್ಕೂ ಮುನ್ನಾ ಎಚ್ಚರ ವಹಿಸಿ.. ಇಲ್ಲವಾದಲ್ಲಿ ನಿಮ್ಮ ಖಾತೆಯಿಂದಲೂ ಹಣ ಕಟ್ ಆಗುತ್ತದೆ..

 

 
error: Content is protected !!