ಇನ್ಮುಂದೆ ‘ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ’ಕ್ಕೆ ಆನ್ ಲೈನ್ ಮೂಲಕವೂ ದೂರು ಸಲ್ಲಿಸಬಹುದು

ಹಾಸನ : ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವು ಆನ್‍ಲೈನ್ ಕಂಪ್ಲೇಂಟ್ ಮ್ಯಾನೇಜ್‍ಮೆಂಟ್ ಸಿಸ್ಟಂನ್ನು ರೂಪಿಸಿದ್ದು, ಸಾರ್ವಜನಿಕರು ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗಕ್ಕೆ ದೂರುಗಳನ್ನು ಸದರಿ ಆನ್-ಲೈನ್ ಪೋರ್ಟ್‍ಲ್‍ನಲ್ಲಿ ದಾಖಲಿಸಬಹುದು ಹಾಗೂ ಅರ್ಜಿದಾರರು ದೂರುಗಳ ಸ್ಥಿತಿ ಕುರಿತು ಮಾಹಿತಿಯನ್ನು ಕೂಡ ಸದರಿ ಪೋರ್ಟ್‍ಲ್‍ನಿಂದ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಜಾಲತಾಣ (ವೆಬ್‍ಸೈಟ್ ) www.ncm.nic.in ಕಾಣಬಹುದಾಗಿದೆ. ಮತ್ತು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಕಚೇರಿ ದೂರವಾಣಿ ಸಂಖ್ಯೆ: 08172-267373ಗೆ ಸಂಪರ್ಕಿಸಬಹುದಾಗಿದೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.