ಸುಭಾಷಿತ :

Wednesday, January 29 , 2020 9:35 PM

ಸಾರ್ವಜನಿಕರಿಗೆ ಸಿಹಿ ಸುದ್ದಿ : ಸದ್ಯದಲ್ಲೇ ಕಡಿಮೆಯಾಗಲಿದೆ ಕಣ್ಣೀರು ತರಿಸುತ್ತಿರುವ ‘ಈರುಳ್ಳಿ ಬೆಲೆ’


Saturday, December 7th, 2019 5:29 pm

ನವದೆಹಲಿ : ದಿನೇ ದಿನೇ ಈರುಳ್ಳಿ ಬೆಲೆ ಸಾರ್ವಜನಿಕರನ್ನು ಕಣ್ಣೀರು ತರಿಸುತ್ತಿದೆ. ಇಂತಹ ಕಣ್ಣೀರು ತರಿಸುತ್ತಿರುವ ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಪರ್ಯಾಯ ಮಾರ್ಗ ಕಂಡುಕೊಂಡಿದ್ದು, ವಿದೇಶದಿಂದ ಈರುಳ್ಳಿ ಆಮದಿಗೆ ಮುಂದಾಗಿದೆ. ಹೀಗಾಗಿ ಶೀಘ್ರವೇ ವಿದೇಶಗಳಿಂದ ಈರಳ್ಳಿ ದೇಶಕ್ಕೆ ಆಮದು ಆಗಲಿದ್ದು, ಈ ಮೂಲಕ ಈರುಳ್ಳಿ ಬೆಲೆ ಕಡಿಮೆ ಆಗುವ ಮೂಲಕ ಸಿಹಿ ಸುದ್ದಿ ದೊರೆಯಲಿದೆ.

ರಾಜ್ಯವಲ್ಲದೇ ದೇಶದಲ್ಲೂ ಈರುಳ್ಳಿ ಬೆಲೆ ಕಣ್ಣೀರು ತರಿಸುತ್ತಿದೆ. ಇಂತಹ ಈರುಳ್ಳಿ ಬೆಲೆ ಏರಿಕೆಯಿಂದಾಗಿ ಹೋಟೆಲ್ ಉದ್ಯಮಕ್ಕೆ ಹೊಡೆತ ಬಿದ್ದಿದರೇ, ಜನ ಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದೆ. ಹೀಗಾಗಿ ಇಂತಹ ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಕೇಂದ್ರ ಮುಂದಾಗಿದ್ದು, ವಿದೇಶಗಳಿಂದ ಈರುಳ್ಳಿ ಆಮದಿಗೆ ಸಮ್ಮತಿ ಸೂಚಿಸಿದ್ದು, ಮೊದಲ ಬ್ಯಾಚ್ ಈರುಳ್ಳಿ ಭಾರತಕ್ಕೆ ಮುಂದಿನ ವಾರ ತಲುಪಲಿದೆ. ಹೀಗಾಗಿ ಈರುಳ್ಳಿ ಬೆಲೆ ಇಳಿಕೆಯಾಗಲಿದೆ.

ಅಂದಹಾಗೇ ಈಜಿಪ್ಟ್ ಮತ್ತು ಟರ್ಕಿಯಿಂದ ಹೆಚ್ಚುವರಿಯಾಗಿ ಈರುಳ್ಳಿಯನ್ನು ಕೇಂದ್ರ ಸರ್ಕಾರ ಆಮದು ಮಾಡಿಕೊಳ್ಳುತ್ತಿದೆ. ಈಗಾಗಲೇ 6,090 ಟನ್ ಈರುಳ್ಳಿ ಆಮದು ಮಾಡಿಕೊಳ್ಳಲು ಒಪ್ಪಿಗೆ ನೀಡಿದ್ದು, ಮುಂದಿನ ವಾರದ ವೇಳೆಗೆ ದೇಶಕ್ಕೆ ರಪ್ಪ್ತು ಆಗಿಲಿದೆ. ಅಲ್ಲದೇ ಜನವರಿ ಮೊದಲ ವಾರದೊಳಗೆ ಟರ್ಕಿಯಿಂದ 11,000 ಟನ್ ಈರುಳ್ಳಿ ಕೇಂದ್ರ ಗ್ರಾಹಕರ ವ್ಯವಹಾರಗಳ ಸಚಿವಾಲಯಕ್ಕೆ ತಲುಪಲಿದ್ದು, ಈ ಮೂಲಕ ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಬರಲಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions