ಸುಭಾಷಿತ :

Saturday, December 7 , 2019 6:59 PM

ನಿಮ್ಮ ಸಂಪತ್ತು, ಸುಖ ಶಾಂತಿ ಹೆಚ್ಚಾಗಬೇಕೇ..? ಒಂದು ಲೋಟ ನೀರನ್ನ ಇಲ್ಲಿ ಇಡಿ..!


Monday, December 2nd, 2019 5:30 am

ಸ್ಪೆಷಲ್‌ಡೆಸ್ಕ್‌: ಪ್ರತಿಯೊಬ್ಬರಿಗೂ ಜಾತಕ ಇರುತ್ತದೆ. ಜಾತಕದಲ್ಲಿ ಕಾಣಿಸಿಕೊಳ್ಳುವ ದೋಷ, ವ್ಯಕ್ತಿಯ ಅದೃಷ್ಟದ ಮೇಲೆ ಪ್ರಭಾವ ಬೀರುತ್ತದೆ. ಜಾತಕ ದೋಷದಿಂದಾಗಿ ಎಷ್ಟೇ ಪ್ರಯತ್ನ ಪಟ್ಟರೂ ವೈಫಲ್ಯ ಬೆನ್ನು ಬಿಡಲ್ಲ. ಆದರೆ ಜಾತಕ ದೋಷವನ್ನ ಸುಲಭವಾಗಿ ಪರಿಹರಿಸಿ ಸಫಲತೆ ಕಾಣಬಹುದು.

ಏನು ಮಾಡಬೇಕು..?
ಪ್ರತಿದಿನ ಒಂದು ಲೋಟ ನೀರನ್ನ ಶಿವಲಿಂಗಕ್ಕೆ ಅರ್ಪಣೆ ಮಾಡಿ. ಆಗ ಶಿವ ಪ್ರಸನ್ನನಾಗುತ್ತಾನೆ. ನಿಮ ಇಚ್ಛೆ ಈಡೇರುತ್ತದೆ. ಪ್ರತಿದಿನ ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ. ತಾಮ್ರದ ಲೋಟದಲ್ಲಿ ನೀರನ್ನ ತೆಗೆದುಕೊಂಡು ಶಿವಲಿಂಗಕ್ಕೆ ಅಭಿಷೇಕ ಮಾಡಿ. ಆಗ ‘ ಓಂ ನಮಃ ಶಿವಾಯ’ ಮಂತ್ರ ಪಠಿಸಬೇಕು. ರಾತ್ರಿ ಮಲಗುವ ವೇಳೆ ತಲೆ ಬದಿಯಲ್ಲಿ ತಾಮ್ರದ ಲೋಟದಲ್ಲಿ ನೀರನ್ನ ಇಟ್ಟು ಮಲಗಿ. ಬೆಳಿಗ್ಗೆ ಎದ್ದಾಕ್ಷಣ ಏಳು ಬಾರಿ ಲೋಟವನ್ನ ತಲೆಗೆ ಸುರಿದ ನಂತರ ಆ ನೀರನ್ನ ಮುಳ್ಳಿನ ಗಿಡದ ಬುಡಕ್ಕೆ ಹಾಕಿ. ಮನೆ ಬಳಿ ಮುಳ್ಳಿನ ಗಿಡ ಇಲ್ಲದಿದ್ದರೆ ಬೇರೆ ಯಾವುದಾದರೂ ಗಿಡದ ಬುಡಕ್ಕೆ ಹಾಕಿ.

ಪ್ರತಿದಿನ ಬೆಳಿಗ್ಗೆ ಸೂರ್ಯ ದೇವನಿಗೆ ನೀರನ್ನ ಅರ್ಪಿಸಿ. ಸ್ನಾನದ ನಂತರ ತಾಮ್ರದ ಲೋಟದಲ್ಲಿ ನೀರನ್ನ ಹಾಕಿ. ಇದಕ್ಕೆ ಕೆಂಪೂ ಹೂ, ಕುಂಕುಮ, ಅಕ್ಕಿಯನ್ನ ಹಾಕಿದ ನಂತರ ಸೂರ್ಯ ದೇವನಿಗೆ ಅರ್ಪಿಸಿ. ‘ ಓಂ ಸೂರ್ಯಾಯ ನಮಃ’ ಎಂಬ ಮಂತ್ರವನ್ನು ಪಠಿಸಿ. ಪ್ರತಿದಿನ ಹೀಗೆ ಮಾಡಿದರೇ ಸಮಾಜದಲ್ಲಿ ಗೌರವ ಪ್ರಾಪ್ತಿಯಾಗುತ್ತದೆ. ಇನ್ನು ಶುಭ ಮುಹೂರ್ತದಲ್ಲಿ ಅಶ್ವತ್ಥ ಮರಕ್ಕೆ ನೀರನ್ನ ಅರ್ಪಿಸಿ. ವಿಷ್ಣುವಿನ ಒಂದು ರೂಪವಾಗಿರುವ ಅಶ್ವತ್ಥ ಮರದಲ್ಲಿ ಎಲ್ಲಾ ದೇವಾನು ದೇವತೆಗಳಿವೆ. ಪ್ರತಿದಿನ ಅಶ್ವತ್ಥ ಮರಕ್ಕೆ ನೀರನ್ನ ಅರ್ಪಿಸುವುದರಿಂದ್ದ ಸುಖ – ಶಾಂತಿ ಪ್ರಾಪ್ತಿಯಾಗುತ್ತದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions