BREAKING: ಶಿವಮೊಗ್ಗದಲ್ಲಿ ಕಾರ್ಮಿಕ ಇಲಾಖೆಯ ಕಟ್ಟಡ ಕುಸಿದು ಓರ್ವ ಸಾವು, ಮತ್ತೋರ್ವನಿಗೆ ಗಂಭೀರ ಗಾಯ

ಶಿವಮೊಗ್ಗ: ಇಲ್ಲಿನ ಕೋಟೆಗಂಗೂರಿನ ಸಿದ್ಲೀಪುರ ಗ್ರಾಮದಲ್ಲಿ ನಿರ್ಮಿಸಿದ್ದಂತ ನೂತನ ಕಾರ್ಮಿಕ ಇಲಾಖೆಯ ಸಮುಚ್ಛಯದ ಕಟ್ಟಡದ ಗೋಡೆ ಕುಸಿದು ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾರೆ. ಅಲ್ಲದೇ ಈ ದುರ್ಘಟನೆಯಲ್ಲಿ ಮತ್ತೋರ್ವ ಗಂಭೀರವಾಗಿ ಗಾಯಗೊಂಡಿರುವಂತ ಘಟನೆ ನಡೆದಿದೆ. ಶಿವಮೊಗ್ಗ ತಾಲ್ಲೂಕಿನ ಕೋಟೆಗಂಗೂರಿನ ಸಿದ್ಲೀಪುರ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಮೃತನನ್ನು ಸಿದ್ಲೀಪುರ ಗ್ರಾಮದ ಮಂಜು(35) ಎಂಬುದಾಗಿ ಗುರುತಿಸಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಬಳಕೆಯಾಗಿದ್ದ ತಾತ್ಕಾಲಿಕ ಕಟ್ಟಡ ಕೆಡವಲು ಮಂಜು ಮತ್ತು ಆತನ ಸಹೋದರ ಮುತ್ತು ಮುಂದಾಗಿದ್ದರು. ಈ ವೇಳೆಯಲ್ಲಿ ಸಮುಚ್ಛಯದ ಕಟ್ಟಡ ಒಂದು … Continue reading BREAKING: ಶಿವಮೊಗ್ಗದಲ್ಲಿ ಕಾರ್ಮಿಕ ಇಲಾಖೆಯ ಕಟ್ಟಡ ಕುಸಿದು ಓರ್ವ ಸಾವು, ಮತ್ತೋರ್ವನಿಗೆ ಗಂಭೀರ ಗಾಯ