ದೆಹಲಿ: ಇಂದು ಮಾಜಿ ಪ್ರಧಾನಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಡಾ.ಮನಮೋಹನ್ ಸಿಂಗ್(Manmohan Singh) ಅವರ ಹುಟ್ಟುಹಬ್ಬಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭ ಕೋರಿದ್ದಾರೆ.

“ಇಂದು 90 ನೇ ವರ್ಷಕ್ಕೆ ಕಾಲಿಡುತ್ತಿರುವ ಮನಮೋಹನ್ ಸಿಂಗ್ ಅವರ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಇನ್ನೂ ರಾಹುಲ್ ಗಾಂಧಿ ಅವರು ಕೂಡ ಡಾ ಮನಮೋಹನ್ ಸಿಂಗ್ ಅವರಿಗೆ ಶುಭ ಹಾರೈಸಿದ್ದಾರೆ. “ಭಾರತದ ಅತ್ಯುತ್ತಮ ರಾಜನೀತಿಜ್ಞರಲ್ಲಿ ಒಬ್ಬರಾದ ಡಾ. ಮನಮೋಹನ್ ಸಿಂಗ್ ಅವರಿಗೆ ಜನ್ಮದಿನದ ಶುಭಾಶಯಗಳು. ಅವರು ನನಗೆ ಮತ್ತು ಇತರ ಕೋಟ್ಯಂತರ ಭಾರತೀಯರಿಗೆ ಸ್ಫೂರ್ತಿಯಾಗಿದ್ದಾರೆ. ಅವರ ಉತ್ತಮ ಆರೋಗ್ಯ ಮತ್ತು ಸಂತೋಷಕ್ಕಾಗಿ ನಾನು ಪ್ರಾರ್ಥಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ ಟ್ವಿಟ್ಟರ್‌ನಲ್ಲಿ ಡಾ ಸಿಂಗ್‌ಗೆ ಶುಭ ಹಾರೈಸಿದ್ದಾರೆ. “ಕಡಿಮೆ ಮಾತನಾಡುವ ಮತ್ತು ಹೆಚ್ಚು ಸಾಧನೆ ಮಾಡಿದ ಹೀರೋ” ಎಂದ್ದಾರೆ.

ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಕೂಡ ಮನಮೋಹನ್ ಸಿಂಗ್ ಅವರಿಗೆ ಶುಭಾಶಯ ಕೋರಿದ್ದಾರೆ.

ಸತತ ಎರಡು ಅವಧಿಗೆ (2004-2014) ಪ್ರಧಾನಿಯಾಗಿದ್ದ ಡಾ. ಸಿಂಗ್ ಅವರು ಇಂದು 90 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರು ಹೆಸರಾಂತ ಅರ್ಥಶಾಸ್ತ್ರಜ್ಞರಾಗಿದ್ದು, 1990 ರ ದಶಕದಲ್ಲಿ ವ್ಯಾಪಕವಾದ ಸುಧಾರಣೆಗಳನ್ನು ಪರಿಚಯಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

BIGG BREAKING NEWS : ವಿಶ್ವವಿಖ್ಯಾತ `ದಸರಾ’ ಉದ್ಘಾಟನೆಗೆ ಮೈಸೂರಿಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು

ಸ್ವತಃ ತಾನೇ ತಿನ್ನಲು ಆಗದ ಮಗಳಿಗಾಗಿ ‘ಮಾ ರೋಬೋಟ್’ ಆವಿಷ್ಕರಿಸಿದ ದಿನಗೂಲಿ ಕಾರ್ಮಿಕನ ಸಾಧನೆಗೆ ದೇಶವ್ಯಾಪಿ ಮೆಚ್ಚುಗೆ

SHOCKING NEWS: 10 ವರ್ಷದ ಬಾಲಕನ ಮೇಲೆ ಸ್ನೇಹಿತರಿಂದಲೇ ಲೈಂಗಿಕ ದೌರ್ಜನ್ಯ, ಖಾಸಗಿ ಅಂಗಕ್ಕೆ ರಾಡ್ ಹಾಕಿ ಚಿತ್ರಹಿಂಸೆ

Share.
Exit mobile version