WATCH VIDEO: ಮದುವೆ ಸಂಭ್ರಮದಲ್ಲಿದ್ದ ಮಹಿಳೆಗೆ ಹೃದಯಾಘಾತ, ಡಾನ್ಸ್‌ ಮಾಡುವಾಗ ಕುಸಿದುಬಿದ್ದು ಸಾವು… ವಿಡಿಯೋ ವೈರಲ್

ಸಿಯೋನಿ (ಮಧ್ಯಪ್ರದೇಶ): ಮದುವೆ ಮನೆಯಲ್ಲಿ ಏರ್ಪಡಿಸಲಾಗಿದ್ದ ಸಂಗೀತ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುತ್ತಿದ್ದ 60 ವರ್ಷದ ಮಹಿಳೆಯೊಬ್ಬರು ಹೃದಯಾಘಾತದಿಂದ ಬುಧವಾರ ಸಾವನ್ನಪ್ಪಿರುವ ಘಟನೆ ಸಿಯೋನಿಯ ಬಖಾರಿ ಗ್ರಾಮದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮೃತ ಮಹಿಳೆಯನ್ನು ಯಶೋದಾ ಸಾಹು ಎಂದು ಗುರುತಿಸಲಾಗಿದ್ದು, ಭೀಮಗಢದ ನಿವಾಸಿಯಾಗಿದ್ದಾರೆ. ವೈರಲ್‌ ಆಗಿರುವ ವಿಡಿಯೋದಲ್ಲಿ, ನಾಲ್ಕು ಮಂದಿ ಮಹಿಳೆಯರು ಸ್ಟೇಜ್‌ ಮೇಲೆ ಡಾನ್ಸ್‌ ಮಾಡುತ್ತಿರುತ್ತಾರೆ. ಈ ವೇಳೆ ಯಶೋದಾ ಇದ್ದಕ್ಕಿದ್ದಂತೆ ಕುಸಿದು ಬೀಳುವುದನ್ನು ನೋಡಬಹುದು. ಯಶೋದಾ ಅವರನ್ನು ಕೂಡಲೇ ಸಿಯೋನಿ … Continue reading WATCH VIDEO: ಮದುವೆ ಸಂಭ್ರಮದಲ್ಲಿದ್ದ ಮಹಿಳೆಗೆ ಹೃದಯಾಘಾತ, ಡಾನ್ಸ್‌ ಮಾಡುವಾಗ ಕುಸಿದುಬಿದ್ದು ಸಾವು… ವಿಡಿಯೋ ವೈರಲ್