ಬೆಂಗಳೂರು : ವಿಶ್ವದಾದ್ಯಂತ ಆತಂಕ ಸೃಷ್ಟಿಸಿರುವ ಕೊರೊನಾ ರೂಪಾಂತರಿ ಒಮಿಕ್ರಾನ್ ಸೋಂಕಿನಿಂದ (omicron variant) ಶ್ವಾಸಕೋಶಕ್ಕೆ ತೊಂದರೆಯಾಗಲ್ಲ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ (Health Minister Dr. K. Sudhakar) ಹೇಳಿದ್ದಾರೆ.
BIG NEWS: ಕಿಲ್ಲರ್ ಕೊರೊನಾ ವಿರುದ್ಧ ಮೈಲುಗಲ್ಲು ಸೃಷ್ಟಿಸಿದ ಕರ್ನಾಟಕ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಮಿಕ್ರಾನ್ ಬಗ್ಗೆ ಯಾವುದೇ ಆತಂಕ ಬೇಡ. ಎರಡು ಡೋಸ್ ಕೊವಿಡ್ ಲಸಿಕೆ ಪಡೆದರೆ ಪರಿಣಾಮ ಕಡಿಮೆ. ಕೊರೊನಾ ಮೂರನೇ ಅಲೆ ದೀರ್ಘ ಕಾಲ ಇರುವುದಿಲ್ಲ. ಒಮಿಕ್ರಾನ್ನಿಂದ ಶ್ವಾಸಕೋಶಕ್ಕೆ ತೊಂದರೆಯಾಗಲ್ಲ ಎಂದು ಹೇಳಿದರು.
BIGG NEWS : ಮದ್ಯ ಪ್ರಿಯರಿಗೆ ಶಾಕಿಂಗ್ ನ್ಯೂಸ್ : ವೀಕೆಂಡ್ ಕರ್ಪ್ಯೂನಲ್ಲಿ ಮದ್ಯ ಮಾರಾಟಕ್ಕಿಲ್ಲ ಅವಕಾಶ!
ಕೊರೊನಾದ ಈ ಅಲೆ ದೀರ್ಘ ಕಾಲ ಇರೋದಿಲ್ಲ. ವೇಗವಾಗಿ ಹರಡುತ್ತೆ, ಬೇಗ ಮುಕ್ತಾಯ ಆಗುತ್ತೆ. ಹೀಗಾಗಿ ಕನಿಷ್ಠ 4-6 ವಾರ ಜನ ಎಚ್ಚರಿಕೆವಹಿಸಬೇಕು. ಕೊರೊನಾ ಬಂದ್ರು ಯಾರು ಆತಂಕ ಪಡುವುದು ಬೇಡ ಓಮಿಕ್ರಾನ್ ಶ್ವಾಸಕೋಶಕ್ಕೆ ಹೋಗೋದು ಕಡಿಮೆ. ಗಂಟಲಲ್ಲಿ ಮಾತ್ರ ಇದು ಇರುತ್ತೆ. ಹೀಗಾಗಿ ಯಾರು ಆತಂಕ ಪಡಬೇಡಿ ಎಂದರು.