ಬೆಂಗಳೂರು: ಕೇವಲ ಮಾಧ್ಯಮಗಳಲ್ಲಿ ಒಮಿಕ್ರಾನ್ ಸುದ್ದಿ ಬರುತ್ತಿದೆ. ಆ ರೀತಿಯ ವಾತಾವರಣ ರಾಜ್ಯದಲ್ಲಿ ಇಲ್ಲ. ಸುಮ್ನೆ ಯಾರೋ ಏರ್ಪೋರ್ಟ್ ನಿಂದ ಓಡಿಹೋದ ಅಂತಾ ಸುಮ್ನೆ ಭಯದ ವಾತಾವರಣ ಸೃಷ್ಟಿಯಾಗ್ತಾ ಇದೆ. ರಾಜ್ಯ, ದೇಶ ಸೇರಿ ಜಗತ್ತು ಒಮಿಕ್ರಾನ್ ರೂಪದಲ್ಲಿ ಕೊರೋನಾ ಅಲೆಗೆ ಬೆಚ್ಚಿಬಿದ್ದಿರುವಾಗ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಒಮಿಕ್ರಾನ್ಗೆ ಟಫ್ ರೂಲ್ಸ್ ಮಾಡುವ ವಿಚಾರವಾಗಿ ಮಾತನಾಡಿದರು.
BIGG NEWS : ಮಂಗಳೂರಿನಲ್ಲಿ ನಾಲ್ವರ ಆತ್ಮಹತ್ಯೆ ಕೇಸ್ ಗೆ ಬಿಗ್ ಟ್ವಿಸ್ಟ್! ಸಾವಿಗೆ ಮತಾಂತರ ಕಾರಣ?
ಇಡೀ ದೇಶದಲ್ಲಿ ಇಲ್ಲದ ಆದೇಶ ಕರ್ನಾಟಕದಲ್ಲಿ ಮಾತ್ರ ಯಾಕೆ? ದೇಶಕ್ಕೆಲ್ಲಾ ಒಂದೇ ರೂಲ್ಸ್ ಇರಬೇಕು; ರಾಜ್ಯಕ್ಕೆ ಸಂಬಂಧಿಸಿದ ವಿಚಾರ ಮಾತ್ರವಲ್ಲ. ಮೊದಲನೆ ಮತ್ತು ಎರಡನೇ ಅಲೆ ಪರಿಹಾರ ಇನ್ನೂ ನೀಡಿಲ್ಲ. ನಾಲ್ಕು ಲಕ್ಷ ಸತ್ತ ಜನರಿಗೆ ಒಂದೇ ಒಂದು ರೂಪಾಯಿ ಪರಿಹಾರ ನೀಡಿಲ್ಲ. ರೈತರಿಗೆ ಬೆಂಬಲ ಬೆಲೆ ನೀಡಿಲ್ಲ. ಈಗ ಎಲ್ಲರೂ ಉಸಿರಾಡುತ್ತಿದ್ದಾರೆ. ಮತ್ತೆ ರೂಲ್ಸ್ ಅಂದ್ರೆ ಎಲ್ಲ ಬ್ಯುಸಿನೆಸ್ ನಿಂತು ಹೋಗುತ್ತದೆ. ಇದಕ್ಕೆಲ್ಲ ಯಾರು ಹೊಣೆ? ಕೆಲವೊಂದು ವ್ಯಾಪಾರ ಬಂದ್ ಆಗಿದ್ದಾವೆ. ಎ.ಸಿ. ಇಲ್ಲದೆ ಯಾವುದೇ ಬ್ಯುಸಿನೆಸ್ ನಡೆಯುತ್ತಿಲ್ಲ. ಸುಮ್ಮನೆ ಗೊಂದಲ ಮೂಡಿಸುವ ಕೆಲಸ ಆಗುತ್ತಿದೆ. ಶೇ. 20 ರಷ್ಟು ಶಾಲೆಗಳು ಎ.ಸಿ.ಯಲ್ಲಿ ನಡೆಯುತ್ತಿವೆ. ಈಗ ಟಫ್ ರೂಲ್ಸ್ ಮಾಡ್ತೇವಿ ಅಂತಿದ್ದಾರೆ ಎಂದು ಡಿ ಕೆ ಶಿವಕುಮಾರ್ ಬ್ಯಾಟ್ ಬೀಸಿದರು.
BIGG NEWS : ಮಂಗಳೂರಿನಲ್ಲಿ ನಾಲ್ವರ ಆತ್ಮಹತ್ಯೆ ಕೇಸ್ ಗೆ ಬಿಗ್ ಟ್ವಿಸ್ಟ್! ಸಾವಿಗೆ ಮತಾಂತರ ಕಾರಣ?