ಬೆಂಗಳೂರು: ರಾಜ್ಯದಲ್ಲಿ ಒಮಿಕ್ರಾನ್ ವೈರಸ್ ಆರ್ಭಟ ಮುಂದುವರೆದಿದೆ. ಮತ್ತೆ ಹೊಸದಾಗಿ ಐವರಿಗೆ ಓಮಿಕ್ರಾನ್ ವೈರಸ್ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಕೊರೋನಾದಂತೆ ಒಮಿಕ್ರಾನ್ ವೈರಸ್ ಸೋಂಕು ಕಂಟಕವಾಗುತ್ತಾ ಎನ್ನುವಂತ ಆತಂಕ ಶುರುವಾಗಿದೆ.
ರಾಜ್ಯದಲ್ಲಿ ಒಮಿಕ್ರಾನ್ ವೈರಸ್ ಆತಂಕ ಶುರುವಾಗಿದೆ. ನಿನ್ನೆ ಯುಕೆ ಸೇರಿದಂತೆ ವಿವಿಧ ದೇಶಗಳಲ್ಲಿ ಕರ್ನಾಟಕಕ್ಕೆ ಆಗಮಿಸಿದ್ದಂತ ಐವರು ವಿದೇಶಿಗರಿಗೆ ಓಮಿಕ್ರಾನ್ ವೈರಸ್ ಸೋಂಕು ತಗುಲಿರೋದು ದೃಢಪಟ್ಟಿತ್ತು. ಇದರಿಂದಾಗಿ ಮತ್ತಷ್ಟು ಜನರಿಗೆ ಓಮಿಕ್ರಾನ್ ಸೋಂಕು ತಗುಲೋ ಭೀತಿ ಎದುರಾಗಿದೆ.
ಇನ್ನೂ ನಿನ್ನೆ ವಿದೇಶದಿಂದ ಬಂದಂತ ಐವರಿಗೆ ಒಮಿಕ್ರಾನ್ ವೈರಸ್ ಸೋಂಕು ಪಾಸಿಟಿವ್ ( Omicron Variant ) ಎಂಬುದಾಗಿ ಪರೀಕ್ಷೆಯಿಂದ ದೃಢಪಟ್ಟಿತ್ತು. ಹೀಗಾಗಿ ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆಯಾಗಿತ್ತು. ಇದರಿಂದಾಗಿ ಸಾರ್ವಜನಿಕ ಪ್ರದೇಶಗಳ ಪ್ರವೇಶಕ್ಕೆ ಸರ್ಕಾರ ಪಾಸ್ ವಿತರಣೆ ಮಾಡೋ ಚಿಂತನೆ ನಡೆಸಿದೆ ಎನ್ನಲಾಗಿದೆ. ಕೋವಿಡ್ ಲಸಿಕೆ ( Corona Vaccine ) ಪಡೆದವರಿಗೆ ಮಾತ್ರವೇ ಮಾಲ್, ಥಿಯೇಟರ್ ಸೇರಿದಂತೆ ಇತರೆ ಸಾರ್ವನಿಕ ಸ್ಥಳಗಳಲ್ಲಿ ಪಾಸ್ ಇದ್ದವರಿಗೆ ಮಾತ್ರ ಎಂಟ್ರಿ ಕೊಡುವ ಅವಕಾಶ ಮಾಡಿಕೊಡುವಂತ ಕಠಿಣ ಕ್ರಮ ಕೈಗೊಳ್ಳಲಿದೆ ಎನ್ನಲಾಗುತ್ತಿದೆ.
ಇ-ಪಾಸ್ ವ್ಯವಸ್ಥೆ ಜಾರಿಗೊಳಿಸೋದಕ್ಕೆ ತಾಂತ್ರಿಕ ತಜ್ಞರ ಸಲಹಾ ಸಮಿತಿಯು ಬಿಬಿಎಂಪಿ, ರಾಜ್ಯ ಸರ್ಕಾರ ಸಲಹೆ ಮಾಡಿದೆ ಎನ್ನಲಾಗಿದೆ. ಒಮಿಕ್ರಾನ್ ವೈರಸ್ ಸೋಂಕು ಮತ್ತಷ್ಟು ಜನರಿಗೆ ಹರಡದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳೋದಕ್ಕೆ ಈ ಪಾಸ್ ವ್ಯವಸ್ಥೆಯನ್ನು ಜಾರಿಗೆ ಮಾಡುವಂತೆ ಸೂಚಿಸಿದೆ ಎಂದು ತಿಳಿದು ಬಂದಿದೆ.
ಇದಷ್ಟೇ ಅಲ್ಲದೇ ಕೊರೋನಾ ಹೆಚ್ಚಳ ತಡೆ ಮತ್ತು ಒಮಿಕ್ರಾನ್ ಕೇಸ್ ಹತೋಟಿಗಾಗಿ ನೈಟ್ ಕರ್ಪ್ಯೂ ಕೂಡ ಜಾರಿಗೊಳಿಸುವಂತೆ ಸಲಹೆ ಮಾಡಿದೆ ಎನ್ನಲಾಗಿದೆ. ಹೀಗಾಗಿ ರಾಜ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡೋದಕ್ಕೆ ಇ-ಪಾಸ್ ಅನ್ನು ಸರ್ಕಾರ ಕಡ್ಡಾಯಗೊಳಿಸೋದಕ್ಕೆ ಮುಂದಾಗಿದ್ದು, ಈ ಪಾಸ್ ಇದ್ದವರಿಗೆ ಮಾತ್ರ ಮಾಲ್, ಥಿಯೇಟರ್, ಪಾರ್ಕ್, ದೇವಸ್ಥಾನ ಸೇರಿದಂತೆ ಇತರೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡೋದಕ್ಕೆ ಅವಕಾಶ ನೀಡಲಾಗುತ್ತಿದೆ ಎನ್ನಲಾಗಿದೆ.