ಭೋಪಾಲ್ : ಮಧ್ಯಪ್ರದೇಶದ ಭೋಪಾಲ್ʼನಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿರುವ ಪುರೋಹಿತನೊರ್ವ ವಿಚಿತ್ರ ಸಮಸ್ಯೆಯಿಂದ ಬಳಲುತ್ತಿದ್ದು, ಮಹಿಳೆಯನ್ನ ಮುಟ್ಟಿದ್ರೆ ಸಾಕು ಮುರ್ಚೆ ಹೋಗ್ತಾನೆ. ಆತ ಹನುಮಂತನ ಭಕ್ತನಾಗಿದ್ದು, ಹಾಗಾಗಿ ಈ ರೀತಿ ಆಗ್ತಿದೆ ಅಂತಾ ಜನ ಮಾತನಾಡಿಕೊಳ್ತಿದ್ದಾರೆ.
ಅಂದ್ಹಾಗೆ, ಪುರೋತರಿನಿಗೆ ಕಳೆದ ಆರು ತಿಂಗಳಿನಿಂದ ಈ ವಿಚಿತ್ರ ಸಮಸ್ಯೆ ಶುರುವಾಗಿದ್ದು, ಇದರಿಂದ ಹತಾಶರಾದ ಭಕ್ತರು ಆತನನ್ನ ಭೋಪಾಲ್ ಜೇಪಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆಸ್ಪತ್ರೆಯಲ್ಲಿ ಅರ್ಚಕನನ್ನ ಮನೋವೈದ್ಯ ಡಾ.ಆರ್.ಕೆ ಬೈರಗಿ ಪರೀಕ್ಷಿಸಿದ್ದು, ಎಲ್ಲಾ ಪರೀಕ್ಷೆಗಳನ್ನ ಮಾಡಲಾಯಿತು. ಆದ್ರೆ, ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ಇನ್ನು ಈ ಅರ್ಚಕ ಆಸ್ಪತ್ರೆಯಲ್ಲಿ ಕೂಡ ನರ್ಸ್ ಸ್ಪರ್ಶಿಸಿದ ತಕ್ಷಣ ಪ್ರಜ್ಞೆ ಕಳೆದುಕೊಂಡಿದ್ದಾನೆ. ಮೊದ ಮೊದಲು ಸಮಸ್ಯೆ ಕಂಡು ಸ್ವತಃ ವೈದ್ಯರೇ ಅಚ್ಚರಿಗೊಂಡಿದ್ದು, ನಂತ್ರ ಕೊಂಚ ಜಾಣ್ಮೆ ಪ್ರದರ್ಶಿಸಿದ್ದಾರೆ. ಈಗ ನಿಮ್ಮನ್ನ ಪರೀಕ್ಷಿಸಲು ಒಬ್ಬ ಮಹಿಳಾ ನರ್ಸ್ ಬರುತ್ತಾಳೆ ಎಂದು ಅರ್ಚಕನಿಗೆ ತಿಳಿಸಿ, ಒರ್ವ ಪುರುಷನನ್ನ ಕಳುಹಿಸಿದ್ದಾರೆ. ಆದ್ರೆ, ಇದರ ಅರಿವಿಲ್ಲದ ಪುರೋಹಿತ ಆತ ಮುಟ್ಟಿದ ಕೂಡಲೇ ಮೂರ್ಚೆ ಹೋಗಿದ್ದಾನೆ. ಪುರೋಹಿತನಿಗೆ ಪ್ರಜ್ಞೆ ಮರಳಿದಾಗ ವೈದ್ಯರು ನಡೆದದ್ದನ್ನೆಲ್ಲಾ ಹೇಳಿದ್ದು, ಇದರೊಂದಿಗೆ ವೈದ್ಯರು ಒಂದು ತೀರ್ಮಾನಕ್ಕೆ ಬಂದಿದ್ದಾರೆ.
“ಸಮಸ್ಯೆಯು ಪರಿವರ್ತನೆಯ ಅಸ್ವಸ್ಥತೆ ಎಂದು ವೈದ್ಯರು ಹೇಳಿದರು. ಈ ಕಾರಣದಿಂದಾಗಿ ಅವರು ವಿಚಿತ್ರವಾಗಿ ವರ್ತಿಸುತ್ತಿದ್ದು, ಅರ್ಚಕರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಡಾ. ಬೈರಾಗಿ ಹೇಳಿದರು. ಇನ್ನು “ಕೆಲವು ದಿನಗಳಿಂದ ಕೌನ್ಸೆಲಿಂಗ್ ನೀಡುತ್ತಿದ್ದು, ವೈದ್ಯಕೀಯ ಚಿಕಿತ್ಸೆಯನ್ನ ಸಹ ಒದಗಿಸುತ್ತಿದ್ದಾರೆ. ಈ ಚಿಕಿತ್ಸೆಯಿಂದ ಪುರೋಹಿತನು ಶೀಘ್ರದಲ್ಲೇ ಈ ಪರಿಸ್ಥಿತಿಯಿಂದ ಹೊರಬರುವುದಾಗಿ” ಬಹಿರಂಗ ಪಡಿಸಿದರು.
ಈ ಸಂದರ್ಭದಲ್ಲಿ ವೈದ್ಯರು ಕೆಲವು ಸಲಹೆಗಳನ್ನು ನೀಡಿದರು. ಒಬ್ಬ ವ್ಯಕ್ತಿಯು ಯಾವುದೇ ಕೆಲಸವನ್ನು ಸಾಮಾನ್ಯಕ್ಕಿಂತ ಹೆಚ್ಚು ಮಾಡುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ ಎಂದು ಹೇಳಲಾಗುತ್ತದೆ. ಅವರು ಹತ್ತು ಅಥವಾ 15 ನಿಮಿಷಗಳಿಗಿಂತ ಹೆಚ್ಚು ಕಾಲ ಪೂಜೆ ಮಾಡುತ್ತಿದ್ದರೆ, ದೇವಾಲಯದಲ್ಲಿ ಗಂಟೆಗಟ್ಟಲೆ ಕಳೆಯುತ್ತಿದ್ದರೆ, ದೀರ್ಘಕಾಲದವರೆಗೆ ಸ್ವಚ್ಛಗೊಳಿಸುತ್ತಿದ್ದರೆ, ಏಕಾಂಗಿಯಾಗಿ ಕುಳಿತು ಮಾತನಾಡುತ್ತಿದ್ದರೆ ಅವರನ್ನು ತಕ್ಷಣವೇ ವೈದ್ಯರ ಬಳಿಗೆ ಕರೆದೊಯ್ಯಲು ಅವರಿಗೆ ಸಾಮಾನ್ಯವಾಗಿ ಹೇಳಲಾಗುತ್ತದೆ ಎಂದರು.