ಕೆಎನ್ಎನ್ ಡಿಜಿಟಲ್ ಡೆಸ್ಕ್ : ನಾವು ಮಾಡುವ ಸಣ್ಣ ಕೆಲಸಗಳು ದೊಡ್ಡ ಅಪಾಯ ತಂದೊಡ್ಡುತ್ತದೆ. ಅದ್ರಂತೆ, ಇಲ್ಲೊಬ್ಬ ಮಹಿಳೆ ಮಾಡಿದ ಪುಟ್ಟ ತಪ್ಪು ತನ್ನ ಜೀವಕ್ಕೆ ಕುತ್ತು ತಂದಿದೆ. ಇಷ್ಟಕ್ಕೂ ಆಗಿದ್ದಾದ್ರು ಏನು.?
24 ವರ್ಷದ ಕೆನಡಾದ ಮಹಿಳೆ ರೆನೀ ಲಾರಿವಿಯರ್, ತನ್ನ ಸ್ನೇಹಿತರೊಂದಿಗೆ ರಾತ್ರಿ ಊಟಕ್ಕೆ ಹೋಗುತ್ತಿದ್ದಾಗ, ಅವಳು ಒಂದು ವಿಚಿತ್ರ ಅಪಘಾತವನ್ನ ಎದುರಿಸುತ್ತಾಳೆ. ಪಾರ್ಟಿಗೆ ಹೋಗುವ ರೆನೀ ಕಾರಿನ ಕೀಯನ್ನ ಮರೆತು ತನ್ನ ಕೋಣೆಯಲ್ಲಿಯೇ ಇಟ್ಟಿದ್ದಾಳೆ. ಇನ್ನು ಮತ್ತೆ ಕೋಣೆಗೆ ಹೋದ್ರೆ ತಡವಾಗುತ್ತೆ ಅನ್ನೋ ಕಾರಣಕ್ಕೆ ತನ್ನ ಕುಟುಂಬ ಸದಸ್ಯರನ್ನ ಕೀ ಎಸೆಯಲು ಕೇಳಿದ್ದಾಳೆ. ಅದ್ರಂತೆ, ಅವ್ರು ಕೀ ಎಸೆದಿದ್ದು, ಅದನ್ನ ಹಿಡಿಯಲು ಯತ್ನಿಸುತ್ತಿದ್ದಾಗ ಕೀ ನೇರವಾಗಿ ಆಕೆಯ ಮುಖಕ್ಕೆ ಚುಚ್ಚಿದೆ. ಯುವತಿಯ ಬಾಲಕಿಯ ಸ್ನೇಹಿತರು ಅದನ್ನ ಹೊರತೆಗೆಯಲು ಯತ್ನಿಸಿದ್ದು, ಆಕೆಗೆ ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಆಕೆಯನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರು ಎಕ್ಸ್-ರೇ ತೆಗೆದಾಗ, ಕೀಲಿಯು ಅವಳ ಕಣ್ಣಿನ ಕೆಳಗೆ ಅವಳ ಕೆನ್ನೆಯ ಒಂದೂವರೆ ಇಂಚು ಆಳಕ್ಕೆ ಇಳಿದಿದೆ ಎಂದು ಅವರು ಕಂಡುಕೊಂಡರು. ನಂತರ ಅದನ್ನ ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆಯಲಾಗಿದೆ.
GOOD NEWS : ಶೀಘ್ರವೇ ‘ಹಡಪದ ಅಪ್ಪಣ್ಣ’ ಸಮುದಾಯಕ್ಕೆ ಪ್ರತ್ಯೇಕ ನಿಗಮ ಸ್ಥಾಪನೆ : ಸಿಎಂ ಬೊಮ್ಮಾಯಿ ಘೋಷಣೆ
‘ಬಜೆಟ್’ನ ಉತ್ತಮ ಅಂಶಗಳನ್ನು ಶ್ಲಾಘಿಸಬೇಕು : ಒಡಿಶಾ ಸಿಎಂ ನವೀನ್ ಪಟ್ನಾಯಕ್
Sleeping Time : ಪದೇ ಪದೇ ಎಚ್ಚರವಾಗ್ತಿದ್ಯಾ.? ಗಮನಿಸಿ, ‘ತಜ್ಞರಿಂದ’ ಸ್ಟ್ರಾಂಗ್ ವಾರ್ನಿಂಗ್.!