ಸುಭಾಷಿತ :

Wednesday, January 22 , 2020 12:11 PM

2020ರ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಪುರುಷ , ಮಹಿಳೆಯರ ಹಾಕಿ ತಂಡ


Sunday, November 3rd, 2019 7:16 am

ಭುವನೇಶ್ವರ್: ಭಾರತದ ಹಾಕಿ ತಂಡ ಒಲಿಂಪಿಕ್ಸ್ ಹಾಕಿ ಅರ್ಹತಾ ಪಂದ್ಯದಲ್ಲಿ ರಷ್ಯಾ ತಂಡವನ್ನು ಮಣಿಸಿ, 2020ರಲ್ಲಿ ನಡೆಯಲಿರುವ ಒಲಿಂಪಿಕ್ಸ್ ಗೆ ಅರ್ಹತೆ ಪಡೆದುಕೊಂಡಿದೆ.

ಸ್ಟಾರ್ ಆಟಗಾರರಾದ ರೂಪೇಂದ್ರ ಬಾರಿಸಿದ ಹ್ಯಾಟ್ರಿಕ್ ಹಾಗೂ ಆಕಾಶ್ ದೀಪ್ ಬಾರಿಸಿದ ಎರಡು ಗೋಲುಗಳ ಸಹಾಯದಿಂದ ಭಾರತ 7-1 ರಿಂದ ಗೆದ್ದು ಒಲಿಂಪಿಕ್ಸ್ ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಯಿತು.

ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಭಾರತ 4-2 ರಿಂದ ಗೆಲುವು ದಾಖಲಿಸಿತ್ತು. ಶನಿವಾರ ನಡೆದ ಪಂದ್ಯದಲ್ಲಿ 7-1 ರಿಂದ ಜಯ ಸಾಧಿಸಿತು.

ಇನ್ನು ಭಾರತ ಮಹಿಳಾ ತಂಡ ಎರಡನೇ ಪಂದ್ಯದಲ್ಲಿ ಸೋತರೂ ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದೆ. ಎರಡನೇ ಪಂದ್ಯದಲ್ಲಿ ಅಮೆರಿಕ ವಿರುದ್ಧ 4-1 ರಿಂದ ನಿರಾಸೆ ಅನುಭವಿಸಿದರೂ, ಎರಡೂ ಪಂದ್ಯಗಳ ಗೋಲುಗಳ ಲೆಕ್ಕಾಚಾರದ ಮೇಲೆ ಭಾರತ ಒಲಿಂಪಿಕ್ಸ್ ಗೆ ಪ್ರವೇಶಿಸಿದೆ.

ಮೊದಲ ಪಂದ್ಯದಲ್ಲಿ ಭಾರತ 5-1ರಿಂಗೆ ಗೆಲುವು ಸಾಧಿಸಿತ್ತು. ಎರಡನೇ ಪಂದ್ಯದಲ್ಲಿ ಅಮೆರಿಕ 1-4 ರಿಂದ ಗೆದ್ದಿತು. ಎರಡೂ ಪಂದ್ಯಗಳಲ್ಲಿ ಅಂತಿಮವಾಗಿ ಭಾರತ 6-5 ರಿಂದ ಗೆಲುವು ದಾಖಲಿಸಿತು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions