ನವದೆಹಲಿ: ಕೆಲ ದಿನಗಳ ಹಿಂದೆ ಮುಕ್ತಾಯಗೊಂಡ ಸಂಸತ್ತಿನ ಮುಂಗಾರು ಅಧಿವೇಶನವೇ ಹಳೆಯ ಸಂಸತ್ ಭವದನಲ್ಲಿ ( Parliament Bhavan ) ನಡೆದಂತ ಕೊನೆಯ ಕಲಾಪವಾಗಿ, ಹಳೆಯ ಸಂಸತ್ ಭವನ ಇತಿಹಾಸದ ಪುಟ ಸೇರಲಿದೆ ಎನ್ನಲಾಗುತ್ತಿದೆ. ಮುಂದಿನ ಚಳಿಗಾಲದ ಕಲಾಪ, ಹೊಸ ಸಂಸತ್ ಭವನದಲ್ಲಿ ಆರಂಭಗೊಳ್ಳಲಿದೆ ಎನ್ನಲಾಗಿದೆ.

Rain in Karnataka: ಇಂದಿನಿಂದ ರಾಜ್ಯದಲ್ಲಿ ತಗ್ಗಲಿದೆ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ

1927ರಲ್ಲಿ ಉದ್ಘಾಟನೆಯಾದಂತ ಸಂಸತ್ ಹಳೆಯ ಭವನ, ಈ ಬಾರಿ ನಡೆದಂತ ಮುಂಗಾರು ಅಧಿವೇಶನದ ಕಲಾಪವೇ ಕೊನೆಯ ಅಧಿವೇಶ ಆದರೂ ಆಗಬಹುದು. ಯಾಕೆಂದ್ರೇ.. 2020ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಡಿಗಲ್ಲು ಹಾಕಿದ ನೂತನ ಸಂಸತ್ ಭವನ 2022ರ ಚಳಿಗಾಲದ ಅಧಿವೇಶನಕ್ಕೆ ಮೊದಲೇ ಪೂರ್ಣಗೊಳ್ಳುವ ಸಾಧ್ಯತೆ ಇದೆ.

‘ವಾಟ್ಸಾಪ್’ ಗೌಪ್ಯತೆ ಕಾಪಾಡಲು ಬಂದಿದೆ 3 ಹೊಸ ಫೀಚರ್: ‘ಸ್ಕ್ರೀನ್ ಶಾಟ್’ಗೂ ಬ್ರೇಕ್ | WhatsApp New Feature

ಅಂದಹಾಗೇ, ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ 20222ರ ಆಗಸ್ಟ್ 15ರ ವೇಳೆಗೆ ನೂತನ ಸಂಸತ್ ಭವನಕ್ಕೆ ಚಾಲನೆ ನೀಡುವ ಉದ್ದೇಶವಿತ್ತಾದರೂ, ಕೋವಿಡ್ ಕಾರಣ ಕಾಮಗಾರಿಯಲ್ಲಿ ವಿಳಂಬ ಉಂಟಾಗಿತ್ತು. ಆದ್ರೇ.. ಕೋವಿಡ್ ಇಳಿಕೆಯ ಬಳಿಕ ಕಾಮಗಾರಿ ಚುರುಕು ಪಡೆದಿದ್ದು, ನೂತನ ಸಂಸತ್ ಭವನ ಕೆಲ ತಿಂಗಳಲ್ಲಿಯೇ ಉದ್ಘಾಟನೆಗೊಂಡು, ಚಳಿಗಾಲದ ಅಧಿವೇಶನದಿಂದ ಆರಂಭಗೊಂಡು, ಇಡೀ ರಾಜಕೀಯ, ಶಾಸನ ಚಟುವಟಿಕೆಗಳು ನೂತನ ಸಂಸತ್ ಭವನಕ್ಕೆ ವರ್ಗಾವಣೆ ಆಗುವ ಸಾಧ್ಯತೆ ಇದೆ.

BIG NEWS: ಅಯೋಧ್ಯೆಯಲ್ಲೂ ಕರ್ನಾಟಕ ಛತ್ರ ನಿರ್ಮಾಣ – ಸಚಿವೆ ಶಶಿಕಲಾ ಜೊಲ್ಲೆ

ಈ ಎಲ್ಲಾ ಕಾರಣದಿಂದಾಗಿ ಹಾಲಿ ಇರುವಂತ ಸಂಸತ್ ಭವನ ಇತಿಹಾಸದ ಪುಟ ಸೇರಲಿದೆ ಎಂದು ಹೇಳಲಾಗುತ್ತಿದೆ. ಈ ಸಂಸತ್ ಭವನವನ್ನು 1927ರ ಫೆಬ್ರವರಿ 12ರಂದು ಆಗಿನ ಭಾರತದ ಸಾಮ್ರಾಟ ಕಿಂಗ್ 5ನೇ ಜಾರ್ಜ್ ಉದ್ಘಾಟಿಸಿದ್ದನ್ನು ಇಲ್ಲಿ ನನೆಪು ಮಾಡಿಕೊಳ್ಳಬಹುದಾಗಿದೆ. ಈ ಕಟ್ಟಡ 6 ಎಕರೆ ವಿಸ್ತಾರವಾಗಿದೆ. 101 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದೆ.

Share.
Exit mobile version