ಸುಭಾಷಿತ :

Wednesday, April 1 , 2020 2:13 AM

ಶಾಕಿಂಗ್ ನ್ಯೂಸ್ : ನರ್ಸ್ ಆಯ್ಕೆಗಾಗಿ ಹತ್ತು ಟ್ರೈನಿ ಯುವತಿಯರನ್ನು ನಗ್ನಗೊಳಿಸಿ ಪರೀಕ್ಷೆ.!


Friday, February 21st, 2020 7:39 pm

ಅಹ್ಮದಾಬಾದ್ : ವಿದ್ಯಾರ್ಥಿನಿಯರ ಒಳ ಉಡುಪು ತೆಗೆಸಿ ಪರೀಕ್ಷೆ ನಡೆಸಿದ ಬೆನ್ನಲ್ಲೇ, ಇದೇ ಮಾದರಿಯಲ್ಲಿ ನರ್ಸ್ ಆಯ್ಕೆಗಾಗಿ ಮೆಡಿಕಲ್ ಪರೀಕ್ಷೆಗೆ ಒಳಪಡಿಸಿದ್ದು ಮಾತ್ರ, ಹತ್ತು ಯುವತಿಯರನ್ನು ಒಟ್ಟಿಗೆ ಬೆತ್ತಲೆಗೊಳಿಸಿ, ಪರೀಕ್ಷೆಗೆ ಒಳಪಡಿಸಿದ್ದು. ಇಂತಹ ಘಟನೆ ಸೂರತ್ ಮುನಿಸಿಪಲ್ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಅಂಡ್ ರಿಸರ್ಚ್ ಆಸ್ಪತ್ರೆಯಲ್ಲಿ ನಡೆದಿದೆ.

ಸೂರತ್ ನ ಮನ್ಸಿಪಲ್ ಇನ್ಸ್ ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಅಂಡ್ ರಿಸರ್ಚ್ ಆಸ್ಪತ್ರೆಯಲ್ಲಿ ಫೆಬ್ರವರಿ 20ರಂದು ನರ್ಸ್ ಗಳ ನೇಮಕಕ್ಕಾಗಿ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತಿತ್ತು. ಈ ವೇಳೆ ವೃತ್ತಿಗೆ ಮೆಡಿಕಲ್ ಆಗಿ ಫಿಟ್ ಆಗಿದ್ದಾರೋ ಇಲ್ಲವೋ ಎನ್ನುವ ಕಾರಣಕ್ಕಾಗಿ 10 ನರ್ಸ್ ಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಈ ವೇಳೆ 10 ಯುವತಿಯರನ್ನು ಒಟ್ಟಿಗೆ ನಗ್ನಗೊಳಿಸಿ, ಒಂದೆಡೆಯಲ್ಲಿಯೇ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಂತಹ ಕ್ರಮವನ್ನು ಖಂಡಿಸಿ, ಯುವತಿಯರು ಕಮೀಷನರ್ ಗೆ ದೂರು ನೀಡಿದ್ದರು. ಹೀಗಾಗಿ ಇದೀಗ ತನಿಖೆಗೆ ಆದೇಶಿಸಿರುವ ಸರ್ಕಾರ, 15 ದಿನಗಳಲ್ಲಿ ವರದಿ ನೀಡುವಂತೆ ಆದೇಶಿಸಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions