BREAKING: ಜಂಟಿ ಸಿಎಸ್ಐಆರ್-ಯುಜಿಸಿ-ನೆಟ್ ಜೂನ್ 2024 ಪರೀಕ್ಷೆಯನ್ನು ಮುಂದೂಡಿದ NTA | Joint CSIR-UGC-NET Examination

ನವದೆಹಲಿ: ಜಂಟಿ ಸಿಎಸ್ಐಆರ್-ಯುಜಿಸಿ-ನೆಟ್ ಪರೀಕ್ಷೆಯನ್ನು ಜೂನ್-2024 ಮುಂದೂಡುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಶುಕ್ರವಾರ ಪ್ರಕಟಿಸಿದೆ. ಈಗಾಗಲೇ ನೀಟ್ ಪರೀಕ್ಷಾ ಅಕ್ರಮದ ನಂತ್ರ ಯುಜಿಸಿ-ನೆಟ್ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಈ ಬೆನ್ನಲ್ಲೇ ಎನ್ ಟಿಎಯಿಂದ ಜಂಟಿ ಸಿಎಸ್ಐಆರ್ ಯುಜಿಸಿ-ನೆಟ್ ಪರೀಕ್ಷೆಯನ್ನು ಮುಂದೂಡಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಜೂನ್ 25 ರಿಂದ 27 ರವರೆಗೆ ನಿಗದಿಯಾಗಿದ್ದ ಜಂಟಿ ಸಿಎಸ್ಐಆರ್-ಯುಜಿಸಿ-ನೆಟ್ ಪರೀಕ್ಷೆಯನ್ನು “ಅನಿವಾರ್ಯ ಸಂದರ್ಭಗಳು” ಮತ್ತು ಲಾಜಿಸ್ಟಿಕ್ ಸಮಸ್ಯೆಗಳಿಂದಾಗಿ ಮುಂದೂಡಿದೆ. ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ನಂತರ ಅಧಿಕೃತ ಎನ್ಟಿಎ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುವುದು. … Continue reading BREAKING: ಜಂಟಿ ಸಿಎಸ್ಐಆರ್-ಯುಜಿಸಿ-ನೆಟ್ ಜೂನ್ 2024 ಪರೀಕ್ಷೆಯನ್ನು ಮುಂದೂಡಿದ NTA | Joint CSIR-UGC-NET Examination