ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಸ್ಲಿಮರಂತೆ ಬಿಂಬಿಸಿ ಸಮುದಾಯಗಳಿಗೆ ಸಂಬಂಧಿಸಿದಂತೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಹಿನ್ನೆಲೆಯಲ್ಲಿ ರಾಷ್ಟೀಯ ಅಧ್ಯಕ್ಷ ಜೆಪಿ ನಡ್ಡ, ಬಿ ವೈ ವಿಜಯೇಂದ್ರ ಹಾಗೂ ಅಮಿತ್ ಮಾಳವಿಯಗೆ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಇದೀಗ ಟ್ವೀಟ್ ನಲ್ಲಿ ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ಕುರಿತಂತೆ ಈ ರೀತಿ ಪೋಸ್ಟ್ ಮಾಡಿದ ಆರೋಪದ ಹಿನ್ನೆಲೆ ಕೆಪಿಸಿಸಿ ಕಾನೂನು ಘಟಕದ ರಮೇಶ್ ಬಾಬು ದೂರು ಸಲ್ಲಿಸಿದ್ದರು. ಹೀಗಾಗಿ ಇದೀಗ ಬಿವೈ ವಿಜಯೇಂದ್ರಗೆ ಬೆಂಗಳೂರಿನ ಹೈ ಗ್ರೌಂಡ್ಸ್ ಠಾಣೆ ಪೊಲೀಸರಿಂದ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟೀಯ ಅಧ್ಯಕ್ಷ ಜೆಪಿ ನಡ್ಡ, ಅಮಿತ್ ಮಾಳವಿಯ ಹಾಗೂ ವಿಜಯೇಂದ್ರ ವಿರುದ್ಧ FIR ದಾಖಲಾಗಿತ್ತು.ಟ್ವಿಟರ್ ನಲ್ಲಿ ಸಮುದಾಯಗಳಿಗೆ ಸಂಬಂಧಿಸಿದ ಪೋಸ್ಟ್ ಮಾಡಿದ್ದ ಆರೋಪ ಹಿನ್ನೆಲೆಯಲ್ಲಿ ಟ್ವಿಟರ್ ನಲ್ಲಿ ಕರ್ನಾಟಕ ಬಿಜೆಪಿ ಘಟಕ ವಿಡಿಯೋ ಪೋಸ್ಟ್ ಮಾಡಿತ್ತು.

ರಾಹುಲ್ ಗಾಂಧಿ ಸಿದ್ದರಾಮಯ್ಯ ಮುಸ್ಲಿಮರು ಎಂಬಂತೆ ಬಿಂಬಿಸಿದ್ದರು. ಮೊಟ್ಟೆಯಿಂದ ಬರುವ ಮರಿಗಳನ್ನು ಬೇರೆ ಸಮುದಾಯಕ್ಕೆ ಹೋಲಿಕೆ ಮಾಡಿದರು. ಎಸ್ ಸಿ, ಎಸ್ ಟಿ, ಒ ಬಿ ಸಿ ಸಮುದಾಯಗಳಿಗೆ ಹೋಲಿಸಿ ವಿಡಿಯೋ ಪೋಸ್ಟ್ ಮಾಡಿತ್ತು. ಈ ಸಂಬಂಧ ಕೆಪಿಸಿಸಿ ಕಾನೂನು ಘಟಕದ ರಮೇಶ ಬಾಬು ಅವರಿಂದ ದೂರ ಸಲ್ಲಿಕೆಯಾಗಿತ್ತು.

ಜೆಪಿ ನಡ್ದ, ವಿಜಯೇಂದ್ರ ಅಮಿತ್ ಮಾಳ್ವಿಯ ವಿರುದ್ಧ ಕೂಡ FIR ದಾಖಲಾಗಿತ್ತು. ಪೋಸ್ಟ್ ಮಾಡಿದ್ದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಅಧಿಕೃತ ಖಾತೆಯಲ್ಲಿ ಅಮಿತ್ ಮಾಳವಿಯ ಈ ಒಂದು ಪೋಸ್ಟ್ ಮಾಡಿದ್ದರು. ಹಾಗಾಗಿ ಈಗ ಈ ಮೂವರು ಬಿಜೆಪಿ ನಾಯಕರಿಗೆ ಬೆಂಗಳೂರಿನ ಹೈ ಗ್ರೌಂಡ್ಸ್ ಪೊಲೀಸ್ ಜಾರಿ ಮಾಡಿದ್ದಾರೆ.

Share.
Exit mobile version