ಮೈಸೂರು: ಕನ್ನಡ ಸಾಹಿತ್ಯ ಲೋಕದಲ್ಲಿ ವಿಮರ್ಶಕರಾಗಿ ಹೆಸರು ಗಳಿಸಿದ್ದಂತ ಖ್ಯಾತ ವಿಮರ್ಶಕ ಜಿ.ಹೆಚ್ ನಾಯಕ್(88) ಅವರು ಇಂದು ನಿಧನರಾಗಿದ್ದಾರೆ. ಈ ಮೂಲಕ ಸಾಹಿತ್ಯ ಲೋಕದ ಕೊಂಡಿಯೊಂದು ಕಳಜಿದಂತೆ ಆಗಿದೆ.
ಮೈಸೂರಿನಲ್ಲಿ ವಯೋ ಸಹ ಖಾಯಿಲೆಯಿಂದ ಬಳಲುತ್ತಿದ್ದಂತ ಕನ್ನಡದ ಖ್ಯಾತ ವಿಮರ್ಶಕ, ಪ್ರಾಧ್ಯಾಪಕ ಜಿ.ಹೆಚ್ ನಾಯಕ್(88) ಅವರು ಇಂದು ನಿಧನರಾಗಿದ್ದಾರೆ.
ಕನ್ನಡ ಸಾಹಿತ್ಯ ಲೋಕದಲ್ಲಿ ಜಿ.ಹೆಚ್ ನಾಯಕ ಎಂಬುದಾಗಿಯೇ ಗುರ್ತಿಸಿಕೊಂಡಿದ್ದ ಅವರ ಸಂಪೂರ್ಣ ಹೆಸರು ಗೋವಿಂದರಾಯ ಹಮ್ಮಣ್ಣ ನಾಯಕ ಎಂಬುದಾಗಿತ್ತು.
ಸೆಪ್ಟೆಂಬರ್ 18, 1935ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಸೂರ್ವೆಯಲ್ಲಿ ಜಿ.ಹೆಚ್ ನಾಯಕ್ ಜನಿಸಿದ್ದರು. ಮೈಸೂರು ವಿವಿಯಿಂದ ಕನ್ನಡ ಸಾಹಿತ್ಯದಲ್ಲಿ ಪಿಜಿ ಪಡೆದಂತ ಅವರು, ಅಲ್ಲಿಯೇ ಕನ್ನಡ ಅಧ್ಯಾಪಕರಾಗಿ ಸೇವೆ ಪ್ರಾರಂಭಿಸಿದರು. ಆ ನಂತ್ರ ಪ್ರಾಧ್ಯಾಪಕರಾಗಿ ನಿವೃತ್ತಿಯನ್ನು ಹೊಂದಿದರು.
ನಿವೃತ್ತಿಯ ಬಳಿಕ ಮೈಸೂರಿನಲ್ಲೇ ವಾಸವಾಗಿದ್ದಂತ ಅವರು, ಸಾಹಿತ್ಯ ಲೋಕಕ್ಕೆ ನೀಡಿದಂತ ಕೊಡುಗೆ ಅಪಾರ. ಕೆಪಿ ಪೂರ್ಣ ಚಂದ್ರ ತೇಜಸ್ವಿ, ಪಿ ಲಂಕೇಶ್ ಮೊದಲಾದ ಸಾಹಿತ್ಯ ದಿಗ್ಗಜರ ಆಪ್ತರಾಗಿದ್ದಂತ ಜಿ.ಹೆಚ್ ನಾಯಕ್, ವಿಮರ್ಶೆಯಲ್ಲಿ ತಮ್ಮದೆ ಆದಂತ ಹೆಸರು ಗಳಿಸಿದ್ದಂತವರು.
ಜಿ.ಹೆಚ್ ನಾಯಕ್ ಅವರ ಬಾಳು ಆತ್ಮಕಥವಾಗಿದೆ. ಅವರ ಉತ್ತರಾರ್ಧ ಕೃತಿಗೆ 2014ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಅಲ್ಲದೇ ಅವರ ನಿರಪೇಕ್ಷ ವಿಮರ್ಶಾ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಬಂದಿದೆ.
BREAKING NEWS: ಮೇ.28ರವರೆಗೆ ಗೋ ಫಸ್ಟ್ ವಿಮಾನಗಳ ಹಾರಾಟ ರದ್ದು | Go First Crisis
ರಾಜ್ಯದ ಹಲವೆಡೆ ಮಳೆ ಹಿನ್ನಲೆ: ‘ಶಾಲೆ’ಗಳಲ್ಲಿ ಈ ಮುಂಜಾಗ್ರತಾ ಕ್ರಮ ಕೈಗೊಳ್ಳಲು ‘ಶಿಕ್ಷಣ ಇಲಾಖೆ’ ಸೂಚನೆ