ಬೆಂಗಳೂರು : ಇಂದು ರಾಜಭವನದಲ್ಲಿ ಕರ್ನಾಟಕದ 24 ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದು, ಬೆಂಗಳೂರಿನ ಈ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ದಿನಾಂಕ 27/05/2023 ರಂದು ಇಂದು ರಾಜಭವನದಲ್ಲಿ ನೂತನ ಸಚಿವರುಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನಲೆಯಲ್ಲಿ ಸೂಕ್ತ ಸಂಚಾರ ಬಂದೋಬಸ್ತ್ ಮಾಡಲಾಗಿದ್ದು, ರಸ್ತೆ ಬಳಕೆದಾರರು ಕೆಳಕಂಡ ಸಂಚಾರ ಮಾರ್ಪಾಡುಗಳನ್ನು ಗಮನಿಸಲು ಕೋರಿದೆ.
1. 8.00. ಸರ್ಕಲ್ನಿಂದ ಗೋಪಾಲ ಗೌಡ ವೃತ್ತದ ವರೆಗೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ವಾಹನ ಸವಾರರಿಗೆ ನೃಪತುಂಗ ರಸ್ತೆ ಅಥವ ಕಬ್ಬನ್ ಪಾರ್ಕ್ ಒಳಭಾಗದ ರಸ್ತೆಯಲ್ಲಿ ಸಂಚರಿಸಲು ಅನುವು ಮಾಡಿರುತ್ತೆ.
2. ಬಾಳೇಕುಂದ್ರಿ ಸರ್ಕಲ್ನಲ್ಲಿ ಕ್ಲೀನ್ಸ್ ರಸ್ತೆಯಿಂದ ಬರುವ ವಾಹನಗಳನ್ನು ಕಾಫೀ ಬೋರ್ಡ್/ಪೊಲೀಸ್ ತಿಮ್ಮಯ್ಯ ವೃತ್ತದ ಕಡೆಗೆ ನಿರ್ಬಂಧಿಸಲಾಗಿರುತ್ತೆ.
3. ಪೊಲೀಸ್ ತಿಮ್ಮಯ್ಯ ವೃತ್ತದಿಂದ ರಾಜಭವನದ ರಸ್ತೆಯನ್ನು ಬಸವೇಶ್ವರ ವೃತ್ತದ ವರೆಗೆ ವಾಹನ ಸಂಚಾರಕ್ಕೆ ನಿರ್ಬಂದಿಸಲಾಗಿರುತ್ತೆ.
4. ಶಿವಾಜಿನಗರ ಬಿಎಂಟಿಸಿ ಬಸ್ ನಿಲ್ದಾಣದಿಂದ ಪೊಲೀಸ್ ತಿಮ್ಮಯ್ಯ ಕಡೆಗೆ ಹೋಗುವ ಬಸ್ಗಳನ್ನು ಕ್ವಿನ್ಸ್ ಸರ್ಕಲ್ & ಸಿದ್ದಲಿಂಗಯ್ಯ ವೃತ್ತದ ಕಡೆಗೆ ಮಾರ್ಗ ಬದಲಾವಣೆ ಮಾಡಲಾಗಿರುತ್ತೆ. 5. ಎಲ್ಲಾ ಮಾದರಿಯ ಬಸ್ಗಳು & ಗೂಡ್ಸ್ ವಾಹನಗಳು ಓಲ್ಡ್ ಹೈಗೌಂಡ್ ಜಂಕ್ಷನ್ನಿಂದ ರಾಜಭವನ& ಕಾಫೀಬೋರ್ಡ್ ಕಡೆಗೆ ಹೋಗುವುದನ್ನು ನಿರ್ಬಂಧಿಸಿರುತ್ತೆ.
6. ಈ ಕೆಳಕಂಡ ರಸ್ತೆಗಳಲ್ಲಿ ಯಾವುದೇ ವಾಹನ ನಿಲುಗಡೆ ಇರುವುದಿಲ್ಲ. ರಾಜಭವನ ರಸ್ತೆ
ಡಾ|| ಬಿ.ಆರ್. ಅಂಬೇಡ್ಕರ್ ರಸ್ತೆ
ಕ್ವೆನ್ಸ್ ರಸ್ತೆ
* ಇನ್ಪೆಂಟ್ರಿ ರಸ್ತೆ
* ಸ್ಯಾಂಕಿ ರಸ್ತೆ
* ಪ್ಯಾಲೇಸ್ ರಸ್ತೆ
* ಕಬ್ಬನ್ ರಸ್ತೆ.
7. ಪಾಸ್ ಇರುವ ವಾಹನಗಳು ರಾಜಭವನದ ಗೇಟ್ ಬಳಿ ಬಂದು ಗಣ್ಯರನ್ನು ಇಳಿಸಿ ಎಲ್.ಹೆಚ್. ಗೇಟ್ನ ಮೂಲಕ ತೆರಳಿ ಪಾರ್ಕಿಂಗ್ಲಾಟ್ನಲ್ಲಿ ವಾಹನವನ್ನು ನಿಲ್ಲಿಸಿಕೊಳ್ಳಬೇಕು.
8. ಕಾರ್ಯಕ್ರಮಕ್ಕೆ ಬರುವ ಆಹ್ವಾನಿತರಿಗೆ ವಿಧಾನ ಸೌಧದ ಸಿಮೆಂಟ್ ಪಾರ್ಕಿಂಗ್, ನೆಹರು ತಾರಾಲಯ, ಎಂ.ಎಸ್. ಬಿಲ್ಡಿಂಗ್ ಒಳ ಭಾಗ, ವಾಹನ ನಿಲುಗಡೆ ಮಾಡಬಹುದಾಗಿರುತ್ತೆ.
9. ಗಣ್ಯ ವ್ಯಕ್ತಿಗಳ ವಾಹನಗಳನ್ನು ವಿಧಾನ ಸೌಧದ ಪಶ್ಚಿಮ ದ್ವಾರ, ಉತ್ತರ ದ್ವಾರದ ಮುಂದಿನ ರಸ್ತೆಯಲ್ಲಿ, ವಿಕಾಸ ಸೌಧದ ಸೆಲ್ಲಾರ್ನ ಪಾರ್ಕಿಂಗ್ & ಶಾಸಕರ ಭವನದ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡಬಹುದಾಗಿರುತ್ತೆ. ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.