ಬೆಂಗಳೂರು: 2021-21ನೇ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯನ್ನು ದಿನಾಂಕ 12-08-2022 ರಿಂದ 25-08-2022ರವರೆಗೆ ನಡೆಸಲು ವೇಳಾಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಗೆ ದಂಡ ಶುಲ್ಕದೊಂದಿಗೆ ಪರೀಕ್ಷಾ ಶುಲ್ಕ ಪಾವತಿಸಲು ಆಗಸ್ಟ್ 4 ರವರೆಗೆ ದಿನಾಂಖ ವಿಸ್ತರಿಸಲಾಗಿದೆ.

Good News : `ಅಕ್ರಮ-ಸಕ್ರಮ’ : ರಾಜ್ಯ ಸರ್ಕಾರದಿಂದ ಕಂದಾಯ ಜಾಗದಲ್ಲಿ ಮನೆ ನಿರ್ಮಿಸಿಕೊಂಡ ಬಡವರಿಗೆ ಭರ್ಜರಿ ಗುಡ್ ನ್ಯೂಸ್

ಪ್ರಾಂಶುಪಾಲರು ಶುಲ್ಕ ಪಾವತಿ ಮಾಡಿದ ವಿದ್ಯಾರ್ಥಿಗಳ ಮಾಹಿತಿಯನ್ನು ಆಗಸ್ಟ್ 5 ರೊಳಗೆ ಸ್ಯಾಟ್ಸ್ ತಂತ್ರಾಂಶದಲ್ಲಿ ದಾಖಲಿಸುವ ಜೊತೆಗೆ ಕೆ2 ಚಲನ್ ಮೂಲಕ ಖಜಾನೆಗೆ ಶುಲ್ಕ ಸಂದಾಯ ಮಾಡಿ ವಿದ್ಯಾರ್ಥಿಗಳ ಪರೀಕ್ಷಾ ಅರ್ಜಿ, ಚೆಕ್ ಲಿಸ್ಟ್, ಚಲನ್ ಗಳನ್ನು ಆಯಾ ಜಿಲ್ಲಾ ಉಪ ನಿರ್ದೇಶಕರಿಗೆ ಸಲ್ಲಿಸಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

BIGG BREAKING NEWS : ಸುರತ್ಕಲ್ ನಲ್ಲಿ `ಫಾಜಿಲ್ ಹತ್ಯೆ’ ಪ್ರಕರಣ : ತಡರಾತ್ರಿ ನಾಲ್ವರು ಪ್ರಮುಖ ಆರೋಪಿಗಳು ಅರೆಸ್ಟ್

ಹೀಗಿದೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿ

ದಿನಾಂಕ 12-08-2022 – ಕನ್ನಡ, ಅರೇಬಿಕ್

ದಿನಾಂಕ 13-08-2022 – ಭೂಗೋಳ ಶಾಸ್ತ್ರ, ಮನಃಶಾಸ್ತ್ರ, ಭೌತಶಾಸ್ತ್ರ

ದಿನಾಂಕ 16-08-2022 – ಹಿಂದಿ

ದಿನಾಂಕ 17-08-2022 – ಐಚ್ಛಿಕ ಕನ್ನಡ, ರಸಾಯನಶಾಸ್ತ್ರ, ಮೂಲ ಗಣಿತ

ದಿನಾಂಕ 18-08-2022 – ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಶಿಕ್ಷಣ ಶಾಸ್ತ್ರ, ಗೃಹ ವಿಜ್ಞಾನ

ದಿನಾಂಕ 19-08-2022 -ಸ ರಾಜ್ಯ ಶಾಸ್ತ್ರ, ಗಣಿತ ಶಾಸ್ತ್ರ

ದಿನಾಂಕ 20-08-2022 – ತರ್ಕಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ವ್ಯವಹಾರ ಅಧ್ಯಯನ

ದಿನಾಂಕ 22-08-2022 – ಇಂಗ್ಲೀಷ್

ದಿನಾಂಕ 23-08-2022 – ಅರ್ಥಶಾಸ್ತ್ರ, ಜೀವಶಾಸ್ತ್ರ

ದಿನಾಂಕ 24-08-2022-ಇತಿಹಾಸ, ಸಂಖ್ಯಾಶಾಸ್ತ್ರ

ದಿನಾಂಕ 25-08-2022 – ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ

Share.
Exit mobile version