ಜೀನಿವಾ: ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ, ವಿಶ್ವದ ಎಲ್ಲಾ ಸಾವುಗಳಲ್ಲಿ ಮುಕ್ಕಾಲು ಭಾಗವು ಹೃದ್ರೋಗ, ಕ್ಯಾನ್ಸರ್, ಮಧುಮೇಹ ಮತ್ತು ಉಸಿರಾಟದ ಕಾಯಿಲೆಗಳಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ ಉಂಟಾಗುತ್ತದೆ ಮತ್ತು 70 ವರ್ಷಕ್ಕಿಂತ ಕಡಿಮೆ ವಯಸ್ಸಿನ 17 ಮಿಲಿಯನ್ ಜನರು ಪ್ರತಿ ವರ್ಷ ಎನ್ಸಿಡಿಗಳಿಂದ (NCD) ಸಾಯುತ್ತಾರೆ ಅಂತ ತಿಳಿಸಿದೆ.

ಇನ್ವಿಸಿಬಲ್ ನಂಬರ್ಸ್ ಎಂಬ ಶೀರ್ಷಿಕೆಯ ಡಬ್ಲ್ಯುಎಚ್ಒ ವರದಿಯು, ಜಾಗತಿಕ ಎನ್ಸಿಡಿ ಹೊರೆಯ ವ್ಯಾಪ್ತಿ, ಅಪಾಯದ ಅಂಶಗಳು ಮತ್ತು ಈ ರೋಗಗಳು ಮತ್ತು ಪರಿಸ್ಥಿತಿಗಳನ್ನು ಎದುರಿಸಲು ಪ್ರತಿ ದೇಶವು ಮಾಡುತ್ತಿರುವ ಪ್ರಯತ್ನಗಳಲ್ಲಿ ಸಾಧಿಸುತ್ತಿರುವ ಪ್ರಗತಿಯನ್ನು ಎತ್ತಿ ತೋರಿಸಿದೆ. “ಪ್ರತಿ ಎರಡು ಸೆಕೆಂಡಿಗೆ 70 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾರಾದರೂ ಎನ್ಸಿಡಿಯಿಂದ ಸಾಯುತ್ತಾರೆ” ಎಂದು ಡಬ್ಲ್ಯುಎಚ್ಒ ತನ್ನ ವರದಿಯಲ್ಲಿ ತಿಳಿಸಿದೆ. ಇದಲ್ಲದೆ, ಹೃದ್ರೋಗ, ಕ್ಯಾನ್ಸರ್, ಮಧುಮೇಹ ಮತ್ತು ಶ್ವಾಸಕೋಶದ ಕಾಯಿಲೆಗಳಂತಹ ಸಾಂಕ್ರಾಮಿಕವಲ್ಲದ ರೋಗಗಳು ಜಾಗತಿಕವಾಗಿ ಸಾಂಕ್ರಾಮಿಕ ರೋಗಗಳಿಗಿಂತ ಹೆಚ್ಚಿನ ಸಾವುಗಳಿಗೆ ಕಾರಣವಾಗುತ್ತವೆ ಅಂತ ತಿಳಿಸಿದೆ.

 

Share.
Exit mobile version