ಶಿವಮೊಗ್ಗ: ಖ್ಯಾತ ಸಾಹಿತಿ ಪ್ರೊ.ಕೆಎಸ್ ಭಗವಾನ್ ವಿರುದ್ಧ ಸಾಗರದ ಜೆಎಂಎಫ್ ಸಿ ಕೋರ್ಟ್ ನಲ್ಲಿ ( Sagar JMFC Court ) ದಾಖಲಾಗಿದ್ದಂತ ಖಾಸಗೀ ದೂರು ದಾಖಲಾಗಿತ್ತು. ಆದ್ರೇ ಈ ಪ್ರಕರಣ ಸಂಬಂಧದ ವಿಚಾರಣೆಗೆ ಸಾಹಿಯಿ ಭಗವಾನ್ ಹಾಜರಾಗಿರಲಿಲ್ಲ. ನಿರಂತರವಾಗಿ ಗೈರು ಹಾಜರಿ ಹಿನ್ನಲೆಯಲ್ಲಿ ಇಂದು ಕೋರ್ಟ್ ಸಾಹಿತಿ ಪ್ರೊ.ಕೆಎಸ್ ಭಗವಾನ್ ( Prof K S Bhagwan ) ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಿದೆ.

BIG NEWS: ‘ಅಪ್ಪು ಅಭಿಮಾನಿ’ಗಳಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದ ಬೆಂಗಳೂರಿನ ರಿಂಗ್ ರಸ್ತೆಗೆ ‘ಪುನೀತ್’ ಹೆಸರಿಡಲು ತೀರ್ಮಾನ

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೆಎಂಎಫ್ ಸಿ ಕೋರ್ಟ್ ನಲ್ಲಿ ಇಕ್ಕೇರಿ ಗ್ರಾಮದ ಮಹಾಬಲೇಶ್ವರ್ ಎಂಬುವರು ಪ್ರೊ.ಕೆಎಸ್ ಭಗವಾನ್ ಅವರ ರಾಮ ಮಂದಿರ ಏಕೆ ಬೇಡ ಕೃತಿಯಲ್ಲಿ ಬಹು ಸಂಖ್ಯಾತರ ಭಾವನೆಗೆ ಧಕ್ಕೆ ತರುವಂತ ಅಂಶಗಳಿವೆ. ಈ ಕೃತಿ ವಿವಾದತ್ಮಕವಾಗಿದೆ ಎಂಬುದಾಗಿ ಖಾಸಗಿ ದೂರು ದಾಖಲಿಸಿದ್ದರು.

‘ಯುಪಿಐ ವಹಿವಾಟಿ’ನಲ್ಲಿ ದಾಖಲೆ ; ಅಕ್ಟೋಬರ್’ನಲ್ಲಿ ಬರೋಬ್ಬರಿ ’12 ಲಕ್ಷ ಕೋಟಿ’ ಟ್ರಾನ್ಸಕ್ಷನ್

ಕೋರ್ಟ್ ವಿಚಾರಣೆಯ ಬಳಿಕ ಸಾಹಿತಿ ಭಗವಾನ್ ವಿರುದ್ಧ ಐಪಿಸಿ ಸೆಕ್ಷನ್ 295(ಎ) ಅಡಿಯಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಇಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಸಾಹಿತಿ ಪ್ರೊ.ಕೆಎಸ್ ಭಗವಾನ್ ಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು. ಆದರೂ ಸಹ ಅವರು ಕೋರ್ಟ್ ಗೆ ಹಾಜರಾಗಿರಲಿಲ್ಲ.

BREANKING NEWS ; ಖ್ಯಾತ ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ‘ಸೇವಾ’ ಸಂಸ್ಥಾಪಕಿ ‘ಎಲಾ ಭಟ್’ (89) ಇನ್ನಿಲ್ಲ |Ela Bhatt Dies

ಈ ಹಿನ್ನಲೆಯಲ್ಲಿ ಸಾಗರದ ಜೆ ಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರು ನಿರಂತರವಾಗಿ ವಿಚಾರಣೆಗೆ ಗೈರು ಹಾಜರಿಯಾದಂತ ಸಾಹಿತಿ ಕೆ.ಎಸ್ ಭಗವಾನ್ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿಗೊಳಿಸಿದೆ.

Share.
Exit mobile version