ಹುಬ್ಬಳ್ಳಿ : ಅವಧಿ ಪೂರ್ವ ಚುನಾವಣೆ ( Karnataka Assembly Election 2023 ) ಮಾಡುವ ಯೋಚನೆಯನ್ನು ನಮ್ಮ ಸರ್ಕಾರ ಅಥವಾ ಪಕ್ಷ ಮಾಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ತಿಳಿಸಿದರು.

ಕೋವಿಡ್19 ಬಗ್ಗೆ ಗಾಬರಿಯಾಗಬೇಕಿಲ್ಲ, ಎಚ್ಚರಿಕೆ ಅಗತ್ಯ – ಸಿಎಂ ಬೊಮ್ಮಾಯಿ

ಅವರು ಇಂದು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಜನರಿಗೆ ನಮ್ಮ ಕಾರ್ಯಕ್ರಮ ಮುಟ್ಟಿಸಿ, ಆ ವರದಿಯ ಆಧಾರದ ಮೇಲೆ ಸಕಾರಾತ್ಮಕ ಜನಾದೇಶ ಪಡೆಯಲು ನಾವು ಪ್ರಯತ್ನ ಮಾಡು ತ್ತಿದ್ದೇವೆ. ಬಹುಶಃ ಕಾಂಗ್ರೆಸ್ ಗೆ ಸಮಯ ಕೊಟ್ಟಷ್ಟು ಅವರ ಒಳಜಗಳ ಹೆಚ್ಚಾಗುತ್ತದೆ ಎಂದು ಅಭದ್ರತೆ ಕಾಡುತ್ತಿದೆ. ಚುನಾವಣೆ ಮುಂಚೆಯಾಗುತ್ತದೆ ಜಗಳವಾಡಬೇಡಿ ಎಂದು ಕಾಂಗ್ರೆಸ್ ನ ಕಾರ್ಯಕರ್ತರಿಗೆ ನೀಡಿರುವ ಸಂದೇಶ ಎಂದರು.

“ನನ್ನ ಹಳೆ ನಂಬರಿನ್ನೂ ಚಾಲ್ತಿಯಲ್ಲಿದೆ, ಕೋವಿಡ್ ಸಹಾಯಕ್ಕಾಗಿ ಕರೆ ಮಾಡ್ಬೋದು” ; ನಟ ಸೋನು ಸೂದ್

ನಾಳೆ ಕೋವಿಡ್ ಕುರಿತು ಕಂದಾಯ ಸಚಿವರು ಹಾಗೂ ಆರೋಗ್ಯ ಸಚಿವ ಡಾ: ಸುಧಾಕರ್ ಅವರು ಸಭೆ ನಡೆಸಲಿದ್ದು, ಬೋಸ್ಟರ್ ಡೋಸ್ ಗಳನ್ನು ಕೊಡಲು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಶಿಬಿರಗಳನ್ನು ಏರ್ಪಡಿಸುವುದು, ಪರೀಕ್ಷೆಗಳನ್ನು ನಡೆಸುವುದು, ಪ್ರತಿಯೊಂದು ಐಎಲ್ ಐ, ಸಾರಿ ಪ್ರಕರಣಗಳಿಗೆ ಕಡ್ಡಾಯವಾಗಿ ಪರೀಕ್ಷೆ ಕೈಗೊಳ್ಳುವುದು, ಮಾಸ್ಕ್ ಧರಿಸುವುದು, ಅಂತರ ಕಾಪಾಡುವುದು ಮುಂತಾದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Share.
Exit mobile version