ಸುಭಾಷಿತ :

Tuesday, January 28 , 2020 2:06 PM

‘ಮೈಸೂರು ರೇಷ್ಮೆ ಸೀರೆ’ ಪ್ರಿಯ ಹೆಂಗಳೆಯರಿಗೆ ಬಿಗ್ ಶಾಕ್ : ರಿಯಾಯಿತಿ ದರ ‘ರೇಷ್ಮೆ ಸೀರೆ’ಗೆ ರಾಜ್ಯ ‘ಸರ್ಕಾರ ಬ್ರೇಕ್’


Sunday, November 3rd, 2019 8:50 pm

ಮೈಸೂರು : ಕಳೆದ ಬಾರಿಯ ಮೈತ್ರಿ ಸರ್ಕಾರ ರೂ.5 ಸಾವಿರಕ್ಕೆ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆಯನ್ನು ಕೊಟ್ಟಿದ್ರು. ಆದ್ರೇ ಅವರು ಯಾವ ಉದ್ದೇಶದಿಂದ ಇಷ್ಟು ರಿಯಾಯಿತಿ ದರದಲ್ಲಿ ಕೊಟ್ಟಿದ್ರೋ ಗೊತ್ತಿಲ್ಲ. ಆದ್ರೇ ಈ ಬಾರಿ ಮಾತ್ರ ರೇಷ್ಮೆ ಸೀರೆಯನ್ನು ರಿಯಾಯಿತಿ ದರದಲ್ಲಿ ಕೊಡುವ ಬಗ್ಗೆ ಸರ್ಕಾರ ನಿರ್ಧಾರ ಮಾಡಿಲ್ಲ ಎಂದು ಸಚಿವ ವಿ ಸೋಮಣ್ಣ ಹೇಳುವ ಮೂಲಕ, ಮಹಿಳೆಯರಿಗೆ ಬಿಗ್ ಶಾಕ್ ನೀಡಿದ್ದಾರೆ.

ಕಳೆದ ಕಾಂಗ್ರೆಸ್ ಸರ್ಕಾರ ಆನಂತ್ರ ಮೈತ್ರಿ ಸರ್ಕಾರಗಳು ಹಬ್ಬದ ಸಂದರ್ಭದಲ್ಲಿ ಸೇರಿದಂತೆ ವಿವಿಧ ಸಂದರ್ಭದಲ್ಲಿ ರೇಷ್ಮೆ ಸೀರಿಯನ್ನು ಮಹಿಳೆಯರಿಗೆ ರಿಯಾಯಿತಿ ದರದಲ್ಲಿ ರೂ.5000ಕ್ಕೆ ನೀಡಲಾಗಿತ್ತು. ಇದೀಗ ಇಂತಹ ರಿಯಾಯಿತಿ ದರದಲ್ಲಿಯೇ ನಿಮ್ಮ ಸರ್ಕಾರ ಈ ಬಾರಿಯೂ ರೇಷ್ಮೆ ಸೀರೆ ನೀಡಲಾಗುತ್ತಾ ಎಂಬ ಸುದ್ದಿಗಾರರ ಪ್ರಶ್ನೆಗೆ, ಸಚಿವ ವಿ ಸೋಮಣ್ಣ ನೋ ಎಂದಿದ್ದಾರೆ.

ಈ ಕುರಿತಂತೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ವಿ ಸೋಮಣ್ಣ, ಈ ರಿಯಾಯಿತಿ ದರಲ್ಲಿ ರೇಷ್ಮೆ ಸೀರೆ ಮಾರಾಟ ಮಾಡೋದ್ರಿಂದ ಯಾರಿಗೂ ಲಾಭ ಇಲ್ಲ. ಕಳೆದ ಬಾರಿ ಸರ್ಕಾರ ಕೊಟ್ಟಿದ್ರೂ, ಅದರ ಲಾಭ ಪಡೆದುಕೊಂಡವರು ಬಡವರಿಗಿಂತ ಶ್ರೀಮಂತರೇ, ಆದ್ರೇ ನಮ್ಮ ಸರ್ಕಾರ ಆ ರೀತಿಯ ರಿಯಾಯಿತಿ ದರದಲ್ಲಿ ರೇಷ್ಮೆ ಸೀರೆ ಕೊಡೋ ಪ್ಲಾನ್ ಯಾವುದು ಮಾಡಿಲ್ಲ ಎಂದು ತಿಳಿಸಿದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions