ಕೊಡಗು : ಕೇರಳದಲ್ಲಿ ನಿಫಾ ವೈರಸ್ ಸೊಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಕೊಡಗು ಜಿಲ್ಲಾ ಅರೋಗ್ಯಧಿಕಾರಿ ಪ್ರತಿಕ್ರಿಯಿಸಿ ಕರೋನಾದಂತೆ ನಿಫಾ ಸೋಂಕಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಲ್ಲ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗು ಜಿಲ್ಲೆಯ ಗಡಿ ಚೆಕ್ ಪೋಸ್ಟ್ ನಲ್ಲಿ ಯಾವುದೇ ವಿಶೇಷ ಕ್ರಮಗಳು ಇರುವುದಿಲ್ಲ.ಗಡಿ ಜಿಲ್ಲೆ ಕೊಡಗಿನಲ್ಲಿ ಜನರಿಗೆ ಈ ಕುರಿತಂತೆ ಅರಿವು ಮೂಡಿಸುವ ಕೆಲಸ ನಡೆಯುತ್ತಿದೆ. ನಿಫಾ ಸೋಂಕಿನ ಬಗ್ಗೆ ಜನರೇ ಮುನ್ನೆಚ್ಚರಿಕ ಕ್ರಮ ಕೈಗೊಳ್ಳಬೇಕು.
ಪ್ರಾಣಿ ಪಕ್ಷಿಗಳು ತಿಂದಿರುವ ಹಣ್ಣು ಹಂಪಲುಗಳನ್ನು ಯಾವುದೇ ಕಾರಣಕ್ಕೂ ತಿನ್ನಬಾರದು ಎಂದು ಸೂಚಿಸಿದರು.ಕೊಡಗು ಜಿಲ್ಲೆಯಲ್ಲಿ ಈವರೆಗೆ ನೀಫಾ ಸೋಂಕಿತರು ಪತ್ತೆಯಾಗಿಲ್ಲ. ಪತ್ತೆಯಾದರೆ ತಕ್ಷಣ ಐಸೋಲೇಶನ್ ಮಾಡಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಕೊಡಗಿನಲ್ಲಿ ಡಿಎಚ್ಒ ಸತೀಶ್ ಕುಮಾರ್ ಹೇಳಿದರು.
ನಾಳೆ ಪ್ರವಾಸಿಗರಿಗೆ ‘ಬಂಡೀಪುರ ಅರಣ್ಯ’ಕ್ಕೆ ನಿರ್ಬಂಧ
ಬಂಡಿಪುರ ಅರಣ್ಯ ಮುಂಚೂಣಿ ಸಿಬ್ಬಂದಿ ದಿನಾಚರಣೆ ಹಿನ್ನೆಲೆ ನಾಳೆ ಬಂಡಿಪುರದಲ್ಲಿ ಪ್ರವಾಸಿಗರಿಗೆ ಸಫಾರಿ ನಿರ್ಬಂಧಿಸಲಾಗಿದೆ. ಈ ಕುರಿತಂತೆ ಬಂಡಿಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ. ರಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಮುಂಚೂಣಿ ಸಿಬ್ಬಂದಿ ಸೇವೆ ಹಾಗೂ ಸಾಧನೆಯನ್ನು ಸ್ಮರಿಸಿ ಗೌರವ ಸಲ್ಲಿಕೆ ಕಾರ್ಯಕ್ರಮ ಆಯೋಜನೆ ಮಾಡಿರುವ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.
ಮೇಲು ಕಾಮನಹಳ್ಳಿ ಸಫಾರಿ ಕೇಂದ್ರದಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಆದ್ದರಿಂದ ನಾಳೆ ಪ್ರವಾಸಿಗರಿಗೆ ಅರಣ್ಯ ಸಂರಕ್ಷಣಾಧಿಕಾರಿ ಡಾ. ರಮೇಶ್ ಕುಮಾರ್ ಸಫಾರಿಯನ್ನು ರದ್ದು ಮಾಡಿದ್ದಾರೆ.