ಸುಭಾಷಿತ :

Wednesday, January 29 , 2020 9:38 PM

ಬಿಗ್ ನ್ಯೂಸ್ : ಡಿ.16ರಂದು ‘ನಿರ್ಭಯಾ ಅತ್ಯಾಚಾರ’ ಆರೋಪಿಗಳಿಗೆ ‘ನೇಣು ಫಿಕ್ಸ್’.?!


Monday, December 9th, 2019 1:17 pm

ನವದೆಹಲಿ : ಕಳೆದ ಇತ್ತೀಚಿಗೆ ನಿರ್ಭಯಾ ಅತ್ಯಾಚಾರ ಸಂತ್ರಸ್ತೆಯ ಮೇಲೆ ಆರೋಪಿಗಳು ನಡು ರಸ್ತೆಯಲ್ಲಿಯೇ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದ ನಂತ್ರ, ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಇದರಿಂದಾಗಿ ದೆಹಲಿಯ ಸಫ್ಜರ್ ಜಂಗ್ ಆಸ್ಪತ್ರೆಗೆ ಸೇರಿದ್ದ ಸಂತ್ರಸ್ತೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಳು. ಇಂತಹ ನಿರ್ಭಯಾ ಅತ್ಯಾಚಾರ, ಕೊಲೆ ಆರೋಪಿಗಳಿಗೆ ಅಂತೂ ಇಂತೂ ನೇಣು ಫಿಕ್ಸ್ ಆಗಿದ್ದು, ಡಿಸೆಂಬರ್ 16ರಂದು ನೇಣಿನ ಕುಣಿಕೆ ಏರಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇಡೀ ದೇಶವನ್ನು ನಿರ್ಭಯಾ ಸಂತ್ರಸ್ತೆಯ ಮೇಲೆ ಆರೋಪಿಗಳು ಪೆಟ್ರೋಲ್ ಸುರಿದು ನಡು ರಸ್ತೆಯಲ್ಲಿಯೇ ಬೆಂಕಿ ಹಚ್ಚಿದ್ದು ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಇದಾದ ಬಳಿಕ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು. ಇಂತಹ ಆರೋಪಿಗಳು ಸಲ್ಲಿಸಿದ್ದ ಕ್ಷಮಾಧಾನ ಅರ್ಜಿಯನ್ನು ಕೇಂದ್ರ ಸರ್ಕಾರ ಹಾಗೂ ರಾಷ್ಟ್ರ ಪತಿಗಳು ತಿರಸ್ಕರಿಸಿದ್ದರು. ಹೀಗಾಗಿ ಗಲ್ಲು ಶಿಕ್ಷೆಯೇ ಆರೋಪಿಗಳಿಗೆ ಫಿಕ್ಸ್ ಆದಂತೆ ಆಗಿತ್ತು.

ಈ ಹಿನ್ನಲೆಯಲ್ಲಿ ತಿಹಾರ್ ಜೈಲಿನಲ್ಲಿ ದಿನ ದೂಡುತ್ತಿರುವ ಆರೋಪಿಗಳಾದಂತ ಮುಖೇಶ್, ಅಕ್ಷಯ್, ವಿನಯ್ ಮತ್ತು ಪವನ್ ಎಂಬುವರಿಗೆ ಡಿಸೆಂಬರ್ 16ರ ಬೆಳಿಗ್ಗೆ 5 ಗಂಟೆಯ ಹಾಗೇ ತಿಹಾರ್ ಜೈಲಿನಲ್ಲಿಯೇ ನೇಣು ಗಂಬಕ್ಕೆ ಏರಿಸಲಾಗುತ್ತದೆ ಎಂದು ವಿಶ್ವಾಸನೀಯ ಮೂಲಗಳಿಂದ ತಿಳಿದು ಬಂದಿದೆ. ಈ ಮೂಲಕ ಪೈಶಾಚಿಕ ಕೃತ್ಯ ಎಸಗಿದವರಿಗೆ ತಕ್ಕ ಶಿಕ್ಷೆಯನ್ನು ನ್ಯಾಯ ವ್ಯವಸ್ಥೆಯ ಮೂಲಕ ನೀಡಲಾಗುತ್ತಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions