ಸುಭಾಷಿತ :

Saturday, December 7 , 2019 7:00 PM

ಪಿಎನ್‌ಬಿ ವಂಚನೆ ಪ್ರಕರಣ : ಜ. 2 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನೀರವ್ ಮೋದಿಗೆ ಯುಕೆ ಕೋರ್ಟ್ ಆದೇಶ


Thursday, December 5th, 2019 7:24 am

ಲಂಡನ್: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವಂಚನೆ ಮತ್ತು ಮನಿ ಲಾಂಡರಿಂಗ್ ಪ್ರಕರಣದ ಆರೋಪ ಹೊತ್ತಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಅವರಿಗೆ ಜನವರಿ 2 ರಂದು ವಿಡಿಯೋಲಿಂಕ್ ಮೂಲಕ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಲು ಯುಕೆ ಕೋರ್ಟ್ ಸೂಚಿಸಲಾಗಿದೆ.

ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಲಂಡನ್ನಿನ ವಾಂಡ್ಸ್ವರ್ತ್ ಜೈಲಿನಿಂದ 28 ದಿನಗಳ ನಿಯಮಿತ “ಕಾಲ್-ಓವರ್” ಅಪಿಯರೆನ್ಸ್ ಗಾಗಿ ನೀರವ್ ಮೋದಿ ಬುಧವಾರ ಹಾಜರಾಗಿದ್ದರು. ಆ ವೇಳೆ ನ್ಯಾಯಾಧೀಶ ಗರೆಥ್ ಬ್ರಾನ್ಸ್ಟನ್ ನೀರವ್ ಮೋದಿ ಹಸ್ತಾಂತರವು ಬರುವ ವರ್ಷ ಮೇ 11 ರಂದು ಪ್ರಾರಂಭವಾಗಲಿದೆ ಮತ್ತು ಐದು ದಿನಗಳಲ್ಲಿ ಪ್ರಕ್ರಿಯೆ ಪೂರ್ಣವಾಗಲಿದೆ ಎಂದು ಪುನರುಚ್ಚರಿಸಿದರು.

2020 ರ ಜನವರಿ 2 ರಂದು ಮೋದಿ ವಿಡಿಯೋಲಿಂಕ್ ಮೂಲಕ ನ್ಯಾಯಾಲಯದಲ್ಲಿ ಹಾಜರಾಗಬೇಕೆಂದು ನ್ಯಾಯಾಧೀಶರು ನಿರ್ದೇಶಿಸಿದ್ದಾರೆ.ಏತನ್ಮಧ್ಯೆ, ಅವರು ಪ್ರತಿ 28 ದಿನಗಳಿಗೊಮ್ಮೆ ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಸೂಚಿಸಲಾಗಿದೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Bollywood
Birthday Wishes
BELIEVE IT OR NOT
Astrology
Cricket Score
Poll Questions