ಸುಭಾಷಿತ :

Monday, December 9 , 2019 2:36 PM

ಜ್ಯೂಸ್ ಎಂದು ನೀಲಗಿರಿ ತೈಲ ಕುಡಿದು ಬಾಲಕಿ ಸಾವು!


Sunday, February 24th, 2019 6:19 pm

ಮೈಸೂರು: ನೀಲಗಿರಿ ತೈಲವನ್ನು ಮನೆಯಲ್ಲಿ ಎಲ್ಲಂದರಲ್ಲಿ ಇಡುವ ಪೋಷಕರು ಈ ಸುದ್ದಿಯನ್ನು ಓದಲೇ ಬೇಕು. ನೀಲಗಿರಿ ತೈಲ ಕುಡಿದು 5 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಕುಶಾಲನಗರ ತಾಲೂಕು ಕೂಡಿಗೆ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ಕೂಡಿಗೆ ಕೊಪ್ಪಲು ಗ್ರಾಮದ ಪ್ರಸನ್ನ ಕುಮಾರ್ ಎಂಬವರ ಮಗಳು ವರ್ಷಿತ (5) ಸಾವನ್ನಪ್ಪಿದ ದುರ್ದೈವಿ ಬಾಲಕಿ. ಜ್ಯೂಸ್ ಎಂದು ಭಾವಿಸಿ ನೀಲಗಿರಿ ತೈಲ ಕುಡಿದು ಅಸ್ವಸ್ಥಳಾದ ವರ್ಷಿತಾಳನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವರ್ಷಿತಾ ಸಾವನ್ನಪ್ಪಿದ್ದಾಳೆ.

ವರ್ಷಿತಾಗೆ ಜ್ಯೂಸ್ ಅಂದ್ರೆ ತುಂಬಾ ಇಷ್ಟ. ಪ್ರಸನ್ನಕುಮಾರ್ ಮಗಳಿಗೆ ಜ್ಯೂಸ್ ತಂದು ಕೊಡುತ್ತಿದ್ದರು. ಮನೆಯಲ್ಲಿ ಆಟವಾಡುತ್ತಿದ್ದ ವರ್ಷಿತಾಗೆ ಇಂದು ನೀಲಗಿರಿ ಬಾಟಲ್ ನೋಡಿದ್ದಾಳೆ. ಬಾಟಲ್‍ನಲ್ಲಿರುವುದು ಜ್ಯೂಸ್ ಎಂದು ತಿಳಿದು ಕುಡಿದ ಪರಿಣಾಮ ಅಸ್ವಸ್ಥಳಾಗಿ ಬಿದ್ದಿದ್ದಳು. ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ ಎಂದು ವರ್ಷಿತಾ ಅಜ್ಜಿ ಸುಶೀಲಾ ತಿಳಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions