ಮತ್ತೆ ನಿಖಿಲ್-ರೇವತಿ ಮದ್ವೆ ಸ್ಥಳ ಬದಲು : ರಾಮನಗರ ಸಮೀಪದ ಕೇತಿಗಾನಹಳ್ಳಿ ತೋಟದ ಮನೆಯಲ್ಲಿ ನಿಖಿಲ್‌-ರೇವತಿ ಸರಳ ಮದುವೆ – Kannada News Now


Film Sandalwood State

ಮತ್ತೆ ನಿಖಿಲ್-ರೇವತಿ ಮದ್ವೆ ಸ್ಥಳ ಬದಲು : ರಾಮನಗರ ಸಮೀಪದ ಕೇತಿಗಾನಹಳ್ಳಿ ತೋಟದ ಮನೆಯಲ್ಲಿ ನಿಖಿಲ್‌-ರೇವತಿ ಸರಳ ಮದುವೆ

ಬೆಂಗಳೂರು : ಏಪ್ರಿಲ್ 17 ರಂದು ನಿಖಿಲ್ – ರೇವತಿ ವಿವಾಹವನ್ನು ರಾಮನಗರದ ಜಾನಪದ ಲೋಕದ ಬಳಿ ನಡೆಸಲು ನಿಶ್ಚಯಲಾಗಿತ್ತು. ಆದರೆ ಕೊರೊನಾ ಭೀತಿ, ಲಾಕ್‌ಡೌನ್‌ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಮದುವೆ ಮಾಡಲು ನಿಶ್ಚಿಯಿಸಲಾಯಿತು. ಆದರೆ ಈಗ ರಾಮನಗರ ಸಮೀಪದ ಗ್ರಾಮದ ತೋಟದ ಮನೆಯಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ನಿಖಿಲ್ ಗೌಡ ಹಾಗು ರೇವತಿ ಅವರ ವಿವಾಹ ಇದೇ 17 ರಂದು ಕೇತಗಾನಹಳ್ಳಿಯ ತೋಟದಲ್ಲಿ ಜರುಗಲಿದ್ದು ಈ ವೇಳೆ ತಾವೆಲ್ಲರೂ ತಾವಿದ್ದ ಸ್ಥಳದಿಂದಲೆ ವಧುವರರನ್ಧು ಆಶೀರ್ವಾದ ಮಾಡಬೇಕಾಗಿ ವಿನಂತಿಸುತ್ತೇನೆ. ಕೊರೋನಾ ಪಿಡುಗು ಮರೆಯಾದ ಮೇಲೆ ತಮ್ಮೆಲ್ಲರ ಆಶೀರ್ವಾದಕ್ಕಾಗಿ ದಂಪತಿಗಳು ನಿಮ್ಮ ಮುಂದೇ ಬರಲಿದ್ದಾರೆ ದಯಮಾಡಿ ತಾವು ಅಭಿಮಾನದಿಂದ ಬಂದು ನಮ್ಮಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುವುದು ಬೇಡ ಆರೋಗ್ಯ ಸಮಾಜ ನಿರ್ಮೀಸೋಣ ಎಂದು ತಿಳಿಸಿದ್ದಾರೆ.