ಸುಭಾಷಿತ :

Monday, February 17 , 2020 11:59 PM

ಕೊನೆಗೂ ತಮ್ಮ ‘ಮದ್ವೆ’ ಬಗ್ಗೆ ಅನೌನ್ಸ್ ಮಾಡಿದ ನಿಖಿಲ್‌ ಕುಮಾರಸ್ವಾಮಿ!


Thursday, January 23rd, 2020 9:33 am

ಬೆಂಗಳೂರು: ನಟ. ರಾಜಕಾರಣಿ ನಿಖಿಲ್‌ ಕುಮಾರಸ್ವಾಮಿ ಅವರು ತಮ್ಮ ಮದ್ವೆ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ಕೆಲ ದಿನಗಳಿಂದ ಕನ್ನಡದ ಖ್ಯಾತ ನಟಿಯೊಂದಿಗೆ ನಿಖಿಲ್‌ ಅವರು ಹಸೆಮಣೆ ಏರಲಿದ್ದಾರೆ ಎನ್ನುವ ಮಾತೊಂದು ಕೇಳಿ ಬರುತಿತ್ತು, ಆದರೆ ಇವೆಲ್ಲ ಊಹ ಪೋಹಗಳಿಗೆ ಖುದ್ದು ನಿಖಿಲ್‌ ಕುಮಾರಸ್ವಾಮಿಯವರು ತೆರೆಎಳೆದಿದ್ದಾರೆ.

ಬುಧವಾರ ನಿಖಿಲ್ ತಮ್ಮ 30ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ವೇಳೆ ಮಾಧ್ಯಮವೊಂದರ ಜೊತೆಗೆ ಮಾತನಾಡಿದ್ದು, ನನ್ನ ಮದುವೆ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದು, ಆ ಸುದ್ದಿಗಳೆಲ್ಲ ಸುಳ್ಳು. ಕಳೆದ ಒಂದು ವರ್ಷದಿಂದ ನಮ್ಮ ಮನೆಯಲ್ಲಿ ನನಗೆ ಹುಡುಗಿಯನ್ನು ಹುಡುಕುತ್ತಿದ್ದು, ಸದ್ಯದಲ್ಲೇ ಫೈನಲ್ ಆಗಲಿದೆ. ಆಕೆ ಯಾರು ಅಂಥ ನಾನೇ ಜನತೆಗೆ ಮಾಹಿತಿ ನೀಡುವೆ ಅಂತ ಹೇಳಿದ್ದಾರೆ.

ಆಕೆ ಸರಳವಾದ ಕನ್ನಡದ ಹುಡುಗಿಯಾಗಿದ್ದು, ನಮ್ಮ ಸಂಸ್ಕೃತಿ ಬಗ್ಗೆ ತುಂಬಾ ಚೆನ್ನಾಗಿ ತಿಳಿದುಕೊಂಡಿದ್ದಾಳೆ. ಅಪ್ಪ-ಅಮ್ಮ ನನ್ನ ಮದುವೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅವರ ನಿರ್ಧಾರವೇ ಅಂತಿಮ ಎಂದು ನಿಖಿಲ್ ತಿಳಿಸಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions