ಬೆಂಗಳೂರು: ಪಿಎಫ್​ಐ ರಾಷ್ಟ್ರೀಯ ಕಾರ್ಯದರ್ಶಿ ಮೊಹಮ್ಮದ್ ಸಾಕಿಬ್ ಫ್ಲ್ಯಾಟ್​ ಮೇಲೆಯೂ ಎನ್​ಐಎ ದಾಳಿ ನಡೆಸಿತ್ತು. ಇದೀಗ ನಗರ ರಿಚ್ಮಂಡ್‌ ಟೌನ್‌ ಪ್ಲ್ಯಾಟ್‌ ನಲಿರುವ ಮೊಹ್ಮದ್‌ ಸಾಕಿದ್‌ ನಿವಾಸದಲ್ಲಿ ಎನ್‌ ಐಎ ದಾಳಿ ಅಂತ್ಯಗೊಂಡಿದೆ.

BREAKING NEWS: NIA ದಾಳಿ ರಾಜಕೀಯ ಪ್ರೇರಿತ; ಪ್ರವೀಣ್‌ ನೆಟ್ಟಾರು ಕೇಸ್‌ ಗೂ ನಮಗೂ ಯಾವ ಸಂಬಂಧವಿಲ್ಲ- ಅಬೂಬಕರ್‌ ಕುಳಾಯಿ

ಅವರ ನಿವಾಸದಲ್ಲಿ ಮನೆ ಅಧಿಕಾರಿಗಳು ನಡೆಸುತ್ತಿದ್ದ ಶೋಧ ಕಾರ್ಯ ಅಂತ್ಯಗೊಂಡಿದ್ದು, ಮನೆಯಲ್ಲಿದ್ದ ಕೆಲ ದಾಖಲೆಗಳನ್ನ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ವೇಳೆ PFI ಕಾರ್ಯಕರ್ತರು NIA ಗೋ ಬ್ಯಾಕ್‌ ಎಂದು ಘೋಷಣೆ ಕೂಗಿದ್ದಾರೆ. NIA ದಾಳಿ ವೇಳೆ ಮೊಹ್ಮದ್‌ ಸಾಕಿದ್‌ ಮನೆಯಲ್ಲಿ ಇರಲಿಲ್ಲ. ಯಾವುದೇ ನೋಟಿಸ್‌ ನೀಡಿದೆ ಎನ್‌ ಐಎ ದಾಳಿ ಮಾಡಿದೆ . ಯಾವ ರಾಜಕೀಯ ಒತ್ತಡದಿಂದ ಈ ರೀತಿ ಆಗುತ್ತಿದೆ ಗೊತ್ತಿಲ್ಲ ಏಕಾಏಕಿ ಮನೆ ಮೇಲೆ NIA ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.

BREAKING NEWS: NIA ದಾಳಿ ರಾಜಕೀಯ ಪ್ರೇರಿತ; ಪ್ರವೀಣ್‌ ನೆಟ್ಟಾರು ಕೇಸ್‌ ಗೂ ನಮಗೂ ಯಾವ ಸಂಬಂಧವಿಲ್ಲ- ಅಬೂಬಕರ್‌ ಕುಳಾಯಿ

ಇನ್ನು ಸದ್ಯ ಬೆಂಗಳೂರು, ಮಂಗಳೂರು, ಶಿರಸಿಯಲ್ಲಿ ಗುರುವಾರ ನಸುಕಿನಲ್ಲಿ ಏಕಕಾಲಕ್ಕೆ ರಾಷ್ಟ್ರೀಯ ತನಿಖಾ ದಳದ (NIA) ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಇದರಲ್ಲಿ 10 ಸ್ಥಳಗಳು ಪಿಎಫ್​ಐ, ಎಸ್​ಡಿಪಿಐ ಪದಾಧಿಕಾರಿಗಳ ಮನೆಗಳಾಗಿದ್ದರೆ, 2 ಸ್ಥಳಗಳು ಪಿಎಫ್​ಐ ಕಚೇರಿಗಳಾಗಿವೆ. ಕೇರಳ, ತಮಿಳುನಾಡು ಮತ್ತು ಆಂಧ್ರ ಪ್ರದೇಶದ ಹಲವೆಡೆಯೂ ದಾಳಿ ನಡೆದಿದೆ.

Share.
Exit mobile version