ಮಿಲನ್: ಇಟಲಿಯ ಇಶಿಯಾ ದ್ವೀಪದಲ್ಲಿ ಭೂಕುಸಿತ ಉಂಟಾಗಿದ್ದು, 3 ವಾರಗಳ ನವಜಾತ ಶಿಶು ಸೇರಿ 7 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಮಣ್ಣು ಕುಸಿತದ ನಂತ್ರ, ಘಟನಾ ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡಗಳು ಎಲ್ಲಾ ಏಳು ಮಂದಿಯ ಶವಗಳನ್ನು ಹೊರತೆಗೆದಿದ್ದಾರೆ.

ಇನ್ನೂ, ನೇಪಲ್ಸ್‌ನಲ್ಲಿ ಐದು ಜನರು ನಾಪತ್ತೆಯಾಗಿದ್ದು, ಅವರಿಗಾಗಿ ಶೋಧಕಾರ್ಯ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕುಸಿತದಿಂದ ಕಟ್ಟಡಗಳು ನೆಲಕ್ಕುರುಳಿದ್ದು, ವಾಹನಗಳು ಸಮುದ್ರದ ಪಾಲಾಗಿವೆ.

ಮೃತರನ್ನು 5 ವರ್ಷದ ಬಾಲಕಿ ಮತ್ತು ಆಕೆಯ 11 ವರ್ಷದ ಸಹೋದರ, 31 ವರ್ಷದ ಇಶಿಯಾ ದ್ವೀಪ ನಿವಾಸಿ ಮತ್ತು ಬಲ್ಗೇರಿಯನ್ ಪ್ರವಾಸಿ ಎಂದು ಗುರುತಿಸಲಾಗಿದೆ.

ಭಾರೀ ಮಳೆಯಿಂದಾಗಿ ಪರ್ವತದ ಭಾಗವು ಸಡಿಲಗೊಂಡು ಈ ಭುಕುಸಿತ ಉಂಟಾಗಿದೆ. ಗಟನಾ ಸ್ಥಳದಲ್ಲಿ ನೀರು ಮತ್ತು ಕೆಸರು ತುಂಬಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಹೀಗಾಗಿ, ಶೋಧ ತಂಡಗಳು ಕಾಲ್ನಡಿಗೆಯಲ್ಲೇ ಕೆಲಸ ಮುಂದುವರೆಸಿವೆ.

BIGG NEWS: ಡಿಜಿಟಲ್ ಮೀಟರ್ ಅಳವಡಿಸಿದ ಬೆಸ್ಕಾಂ; ಹೊಸ ಮೀಟರ್‌ನಲ್ಲಿ ದುಪ್ಪಟ್ಟು ಬಿಲ್

 

BIGG NEWS : ರಾಹುಲ್ ಗಾಂಧಿ ನೋಡಲು ಮುಗಿಬಿದ್ದ ಜನ : ಬಿದ್ದು ‘ ಕೈ ಮುರಿದುಕೊಂಡ ಕೆ.ಸಿ ವೇಣುಗೋಪಾಲ್ ‘ | K.C Venugopal

BIGG NEWS : ಸಚಿವ ಎಸ್. ಅಂಗಾರಗೆ ಡೆಂಗ್ಯೂ ದೃಢ : ಆಸ್ಪತ್ರೆಗೆ ದಾಖಲು

BIGG NEWS: ಡಿಜಿಟಲ್ ಮೀಟರ್ ಅಳವಡಿಸಿದ ಬೆಸ್ಕಾಂ; ಹೊಸ ಮೀಟರ್‌ನಲ್ಲಿ ದುಪ್ಪಟ್ಟು ಬಿಲ್

Share.
Exit mobile version