ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆ : ಭಾರತೀಯ ಪ್ರಯಾಣಿಕರಿಗೆ ಪ್ರವೇಶ ನಿರ್ಬಂಧಿಸಿದ ನ್ಯೂಜಿಲ್ಯಾಂಡ್

ನವದೆಹಲಿ : ಕೋವಿಡ್-19 ಸೋಂಕುಗಳು ಇತ್ತೀಚೆಗೆ ಹೆಚ್ಚಾದ ಹಿನ್ನೆಲೆಯಲ್ಲಿ ಭಾರತದಿಂದ ಪ್ರಯಾಣಿಕರ ಪ್ರವೇಶವನ್ನು ನ್ಯೂಜಿಲ್ಯಾಂಡ್ ಸರ್ಕಾರ ಸ್ಥಗಿತಗೊಳಿಸಿದೆ. ಏಪ್ರಿಲ್ 11 ರಿಂದ ತಾತ್ಕಾಲಿಕ ಅಮಾನತು ಜಾರಿಗೊಳಿಸಲಾಗುವುದು ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ನ್ಯೂಜಿಲ್ಯಾಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಅವರು ಇಂದು ಆಕ್ಲೆಂಡ್ ನಲ್ಲಿ ನಡೆದ ಸಂಕ್ಷಿಪ್ತ ಸಭೆಯಲ್ಲಿ ಈ ಘೋಷಣೆ ಮಾಡಿದರು. ಏಪ್ರಿಲ್ 11 ರ ಸಂಜೆ 4 ರಿಂದ ಏಪ್ರಿಲ್ 28 ರವರೆಗೆ ನಿರ್ಬಂಧ ಜಾರಿಯಲ್ಲಿರುತ್ತದೆ ಎಂದು ಪ್ರಧಾನಿ ಜಸಿಂಡಾ ಅರ್ಡೆರ್ನ್ ತಿಳಿಸಿದ್ದಾರೆ. ರಾಮ ಮಂದಿರ … Continue reading ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆ : ಭಾರತೀಯ ಪ್ರಯಾಣಿಕರಿಗೆ ಪ್ರವೇಶ ನಿರ್ಬಂಧಿಸಿದ ನ್ಯೂಜಿಲ್ಯಾಂಡ್