ಹುಬ್ಬಳ್ಳಿ: ಹುಬ್ಬಳ್ಳಿಯ ಕಾಂಗ್ರೆಸ್ ಕೌನ್ಸಿಲರ್ ನಿರಂಜನ್ ಹಿರೇಮಠ್ ಅವರ ಪುತ್ರಿ ನೇಹಾ ಹಿರೇಮಠ್ ಕೊಲೆ ಪ್ರಕರಣ ಅಮೆರಿಕದಲ್ಲಿ ಕೂಡ ಪ್ರತಿಧ್ವನಿಸಿದೆ.

ನೇಹಾಗೆ ನ್ಯಾಯ ದೊರಕಿಸಿಕೊಡುವಂತೆ ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು ಮನವಿ ಮಾಡಿದ್ದಾರೆ. ‘ಜಸ್ಟಿಸ್ ಫಾರ್ ನೇಹಾ’, ‘ಲವ್ ಜಿಹಾದ್ ನಿಲ್ಲಿಸಿ’ ಮತ್ತು ‘ಸೇವ್ ಹಿಂದೂ ಗರ್ಲ್’ ಎಂಬ ಪೋಸ್ಟರ್ಗಳನ್ನು ಅನಿವಾಸಿ ಭಾರತೀಯರು ಪ್ರದರ್ಶಿಸಿದರು. ಅಲ್ಲದೆ, ನೇಹಾ ಅವರ ಫೋಟೋವನ್ನು ನ್ಯೂಯಾರ್ಕ್ನ ಟೈಮ್ಸ್ ಸ್ಕ್ವೇರ್ನಲ್ಲಿ ಪ್ರದರ್ಶಿಸಲಾಯಿತು.

ನೇಹಾ ಕೊಲೆ ಪ್ರಕರಣವನ್ನು ಪ್ರತಿಭಟಿಸಲು ಮತ್ತು ಸಂತ್ರಸ್ತೆಯ ಕುಟುಂಬಕ್ಕೆ ನ್ಯಾಯಕ್ಕಾಗಿ ಒತ್ತಾಯಿಸಿ ನ್ಯೂಜೆರ್ಸಿ ಮತ್ತು ವಿಶ್ವದ ಇತರ ಭಾಗಗಳಲ್ಲಿ ಜಸ್ಟಿಸ್ ಫಾರ್ ನೇಹಾ ಹಿರೇಮಠ್ ರ್ಯಾಲಿ ನಡೆಯಿತು. ಏಪ್ರಿಲ್ 28 ರ ಭಾನುವಾರ ಮಧ್ಯಾಹ್ನ 2 ಗಂಟೆಗೆ ನ್ಯೂಯಾರ್ಕ್ನ ಟೈಮ್ಸ್ ಸ್ಕ್ವೇರ್ನಲ್ಲಿ ರ್ಯಾಲಿ ನಡೆಸಲಾಯಿತು ಇದು ಲವ್ ಜಿಹಾದ್ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿತ್ತು. ಬಲವಂತದ ಮತಾಂತರ, ಅತ್ಯಾಚಾರ ಮತ್ತು ಹಿಂದೂ ಮಹಿಳೆಯರ ಮೇಲಿನ ಹಿಂಸಾಚಾರದ ವಿರುದ್ಧ ಅನೇಕ ಜನರು ತಮ್ಮ ಭಾಗವಹಿಸುವಿಕೆಯನ್ನು ತೋರಿಸಿದ್ದಾರೆ ಎನ್ನಲಾಗಿದೆ.

Share.
Exit mobile version