ನಾಳೆ NEET ಪರೀಕ್ಷೆ: ಕೊರೊನಾ ಕಟ್ಟುನಿಟ್ಟಿನ ಕ್ರಮಗಳ ನಡುವೆ ಪರೀಕ್ಷೆ ಬರೆಯಲಿದ್ದಾರೆ 15 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು..! – Kannada News Now


India

ನಾಳೆ NEET ಪರೀಕ್ಷೆ: ಕೊರೊನಾ ಕಟ್ಟುನಿಟ್ಟಿನ ಕ್ರಮಗಳ ನಡುವೆ ಪರೀಕ್ಷೆ ಬರೆಯಲಿದ್ದಾರೆ 15 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು..!

ಡಿಜಿಟಲ್‌ ಡೆಸ್ಕ್:‌ ಕಟ್ಟುನಿಟ್ಟಾದ ಕೊರೊನಾ ಮುನ್ನೆಚ್ಚರಿಕೆಗಳ ಮಧ್ಯೆ 15 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ನೀಟ್‌ ಪರೀಕ್ಷೆಗೆ ಹಾಜರಾಗಲಿದ್ದಾರೆ. ಇನ್ನು ಸಾಮಾಜಿಕ ದೂರವನ್ನು ಅಂತರವನ್ನ ಕಾಪಾಡಿಕೊಳ್ಳಲು ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನ 2,546 ರಿಂದ 3,843 ಕ್ಕೆ ಹೆಚ್ಚಿಸಲಾಗಿದ್ದು, ಪ್ರತಿ ಕೋಣೆಯ ಅಭ್ಯರ್ಥಿಗಳ ಸಂಖ್ಯೆಯನ್ನ 24 ರಿಂದ 12 ಕ್ಕೆ ಇಳಿಸಲಾಗಿದೆ.

ನಾಳೆ ನಡೆಯಲಿರುವ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ಗೆ 15 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಲಿದ್ದಾರೆ. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕಠಿಣ ಮುನ್ನೆಚ್ಚರಿಕೆಗಳ ಕೈಗೊಳ್ಳಲಾಗವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (ಎನ್‌ಟಿಎ) ಅಧಿಕಾರಿಗಳು ತಿಳಿಸಿದ್ದಾರೆ.

ಈಗಾಗಲೇ ಕೊರೊನಾ ಆತಂಕದ ದೃಷ್ಟಿಯಿಂದ ಎರಡು ಬಾರಿ ಮುಂದೂಡಲಾಗಿದ್ದು, ಮೊದಲು ಮೇ 3ಕ್ಕೆ ನಿಗದಿಪಡಿಸಲಾಗಿದ್ದ ಪರೀಕ್ಷೆ ನಂತ್ರ ಜುಲೈ 26 ಕ್ಕೆ ಮತ್ತು ಕೊನೆಯದಾಗಿ ಸೆಪ್ಟೆಂಬರ್ 13ಕ್ಕೆ ಮುಂದುಡಲಾಯ್ತು.

ಅಂದ್ಹಾಗೆ, ಒಟ್ಟು 15.97 ಲಕ್ಷ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, “ಪರೀಕ್ಷಾ ಸಭಾಂಗಣಗಳ ಹೊರಗಿನ ಸಾಮಾಜಿಕ ದೂರವನ್ನು ಖಚಿತಪಡಿಸಿಕೊಳ್ಳಲು, ಅಭ್ಯರ್ಥಿಗಳ ಪ್ರವೇಶ ಮತ್ತು ನಿರ್ಗಮನವನ್ನು ಯೋಜಿಸಲಾಗಿದೆ. ಅಭ್ಯರ್ಥಿಗಳು ಕಾಯುವಾಗ ಸಾಕಷ್ಟು ಸಾಮಾಜಿಕ ಅಂತರದಿಂದ ನಿಲ್ಲುವಂತೆ ಪರೀಕ್ಷಾ ಕೇಂದ್ರಗಳ ಹೊರಗಡೆ ಸಾಕಷ್ಟು ವ್ಯವಸ್ಥೆಗಳನ್ನು ಮಾಡಲಾಗಿದೆ” ಎಂದು ಎನ್‌ಟಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
error: Content is protected !!